ಆರ್.ಆರ್‌.ನಗರ ಉಪಚುನಾವಣೆಗೆ ಮಿಲಿಟರಿ ಕರೆಸಬೇಕು-ಮುನಿರತ್ನ

ಆರ್.ಆರ್.ನಗರ ಉಪಚುನಾವಣೆ ಗೆಲ್ಲಲು ಕ್ಷೇತ್ರದ ಹೊರಗಿನಿಂದ 4 ಸಾವಿರ ಜನರನ್ನು ಕರೆಸಿದ್ದಾರೆ. ಆರ್.ಆರ್.ನಗರ ಉಪಚುನಾವಣೆ ಗೆಲ್ಲಲು ಎದುರಾಳಿಗಳು ಏನು ಮಾಡಲೂ ರೆಡಿಯಾಗಿದ್ದಾರೆ. ಆದ್ದರಿಂದ ಈಗ ನಾನು ಉಪಚುನಾವಣೆ ಭದ್ರತೆಗಾಗಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದು ಮಿಲಿಟರಿ ಕಮಾಂಡೋ ಕಳಿಸಲು ಆಗ್ರಹಿಸುತ್ತೇನೆ ಎಂದು ಬೆಂಗಳೂರಿ‌ನ ರಾಜರಾಜೇಶ್ವರಿನಗರ(ಆರ್.ಆರ್.ನಗರ) ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.
ಆರ್.ಆರ್.ನಗರ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಪ್ರಚಾರ ಕಾರ್ಯ ನಡೆಸುತ್ತಿದ್ದ ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿಕೆ ನೀಡಿ “ಉಪಚುನಾವಣೆಯಲ್ಲಿ ನನ್ನ ಸೋಲಿಸಿ ಗೆಲ್ಲಲು ಎದುರಾಳಿ ಅಭ್ಯರ್ಥಿಗಳ ಬೆಂಬಲಿಗರು,ಮುಖಂಡರು ಮತದಾರರಿಗೆ ಬಯಸಿದ್ದೆನ್ನೆಲ್ಲಾ ಕೊಡುತ್ತೇವೆ ಎಂದು ಆಮಿಷವೊಡ್ಡುತ್ತಿದ್ದಾರೆ” ಎಂದು ಗಂಭೀರವಾಗಿ ಆರೋಪಿಸಿದರು.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment