ಅಮಿತ್ ಶಾ ಹುಟ್ಟುಹಬ್ಬಕ್ಕೆ ಮೋದಿ ಭಾವನಾತ್ಮಕ ಟ್ವೀಟ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ೫೬ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಭಾರತಕ್ಕೆ ನೀವು ನೀಡಿದ ಸಮರ್ಪಣೆ ಹಾಗೂ ಉತ್ಕೃಷ್ಟತೆಗೆ ನಮ್ಮ ದೇಶ ಸಾಕ್ಷಿಯಗಿದೆ. ನಿಮ್ಮ ಪ್ರಯತ್ನದಿಂದ ಬಿಜೆಪಿ ಬಲಿಷ್ಟವಾಗಿದ್ದು, ಗುರುತಿಸಿಕೊಳ್ಳುವಂತಾಗಿದೆ. ಭಾರತಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ದೇವರು ನಿಮಗೆ ಸುದೀರ್ಘ ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

Add Comment