ಪುಟಾಣಿ ಚಿರು ಹುಟ್ಟಿದ ಸಮಯದಲ್ಲಿವೆ ಈ ಅದ್ಭುತ ಯೋಗಗಳು

ದಿವಂಗತ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಜೂನಿಯರ್ ಚಿರು ಬಹಳ ಅದೃಷ್ಟಗಳನ್ನು ಹೊತ್ತು ಬಂದಿದ್ದಾನೆ ಎನ್ನಲಾಗಿದೆ. ಪುಟಾಣಿ ಚಿರು ಹುಟ್ಟಿರುವ ಸಮಯ, ರಾಶಿ, ನಕ್ಷತ್ರ ಎಲ್ಲವೂ ಬಹಳ ಅದ್ಭುತವಾಗಿದ್ದು, ಮುಂದಿನ ದಿನಗಳಲ್ಲಿ ಸರ್ಜಾ ಕುಟುಂಬದ ಕೀರ್ತಿ ಎತ್ತಿ ಹಿಡಿಯುತ್ತಾನೆಂದು ಖ್ಯಾತ ಜೋತಿಷಿ ಬಸವಾರಾಜ್ ಗುರೂಜಿ ತಿಳಿಸಿದ್ದಾರೆ. ಇನ್ನು ಜೂನಿಯರ್ ಚಿರು ಗುರುವಾರ ಬೆಳಗ್ಗೆ 11 ಗಂಟೆ 9 ನಿಮಿಷಕ್ಕೆ ಅಮೃತಘಳಿಗೆಯಲ್ಲಿ ಜನಿಸಿದ್ದು, ಧನು ಲಗ್ನ, ಧನು ರಾಶಿ, ಹಾಗೂ ಪೂರ್ವಾಷಡ ನಕ್ಷತ್ರದಲ್ಲಿ ಮಗುವಿನ ಜನನವಾಗಿದೆ. ಇನ್ನು ಯೋಗಗಳನ್ನು ನೋಡೋದಾದ್ರೇ, ಸುಕರ್ಮ ಯೋಗ, ತೈತಲೆ ಕರಣ ಯೋಗ, ಬುಧಾದಿತ್ಯ ಯೋಗ ಸೇರಿದಂತೆ ಅದ್ಭುತವಾದ ಗಜಕೇಸರಿ ಯೋಗದಲ್ಲಿ ಪುಟಾಣಿ ಚಿರು ಜನಿಸಿದ್ದಾನೆ ಎಂದು ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Add Comment