ಕರ್ನಾಟಕಕ್ಕೆ ಕಾವೇರಿ ಶಾಕ್- ನಾಳೆ ಪ್ರತಿಭಟನೆ?

ಕೇಂದ್ರದಿಂದ ಕರ್ನಾಟಕಕ್ಕೆ ಮೊದಲ ಶಾಕ್​​. ರಾಜ್ಯಕ್ಕೆ ಕಾವೇರಿ ನದಿ ನೀರು ಪ್ರಾಧಿಕಾರ ಶಾಕ್​ ನೀಡಿದೆ, ಜೂನ್ ತಿಂಗಳೊಳಗಾಗಿ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಪ್ರಾಧಿಕಾರ ಷರತ್ತುಬದ್ಧ ಆದೇಶ ನೀಡಿದೆ. ಕಾವೇರಿ ನೀರಿಗಾಗಿ ತಮಿಳುನಾಡು ಪ್ರಾಧಿಕಾರದ ಮೊರೆ ಹೋಗಿತ್ತು. ದೆಹಲಿಯ ಜಲಮಂಡಳಿಯಲ್ಲಿ ಇಂದು ನಡೆದ ಮೂರನೇ ಸಭೆಯಲ್ಲಿ ಈ ಆದೇಶ ನೀಡಿದೆ.

ಅಂದಹಾಗೆ, ಕಾವೇರಿ ಜಲಾಶಯಗಳಿಗೆ ಒಳಹರಿವು ಇದ್ದಲ್ಲಿ ಮಾತ್ರ ತಮಿಳುನಾಡಿಗೆ ನೀರು ಹರಿಸಿದರೆ ಸಾಕು ಎಂದು ಪ್ರಾಧಿಕಾರ ಹೇಳಿರುವುದು ರಾಜ್ಯಕ್ಕೆ ನೆಮ್ಮದಿಯ ವಿಚಾರ. ಮೂರು ಹಂತಗಳಲ್ಲಿ ಒಟ್ಟಿ 9.19 ನೀರು ಹರಿಸಬೇಕು. ಆದರೆ, ಜಲಾಶಗಳಲ್ಲೇ ನೀರು ಇಲ್ಲದಿರುವಾಗ ಇದು ಸಾಧ್ಯವಾಗದ ಮಾತು. ಮಳೆ ಬಂದು ಒಳ ಹರಿವು ಹೆಚ್ಚಾದರೆ ನೀರು ಹರಿಸಿ ಎಂದು ಕರ್ನಾಟಕಕ್ಕೆ ಆದೇಶ ನೀಡಿದೆ. ಇಲ್ಲದಿದ್ದರೆ ತಮಿಳುನಾಡಿಗೆ ನೀರು ಹರಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಒಂದು ವೇಳೆ ಮಳೆಯಾಗದೇ ಇದ್ದಲ್ಲಿ, ತನ್ನ ಆದೇಶವನ್ನು ಪರಿಶೀಲಿಸುವುದಾಗಿ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಒಂದು ವೇಳೆ ಷರತ್ತನ್ನು ವಿಧಿಸದೇ ಇದ್ದಿದ್ದರೆ, ಕರ್ನಾಟಕದ ಸ್ಥಿತಿ ಹರೋಹರವಾಗುತ್ತಿತ್ತು. ಈ ಮಧ್ಯೆ, ಮಂಡ್ಯದಲ್ಲಿ ರೈತ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗ್ತಿವೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

Add Comment