Exclusive- ಅಣ್ಣಾಮಲೈ ರಾಜೀನಾಮೆಗೆ ಕಾರಣವಾಯ್ತಾ ಮಾನಸ ಸರೋವರ ?

 

ಖಡಕ್ ಐಪಿಎಸ್ ಆಧಿಕಾರಿ ಅಣ್ಣಾಮಲೈ ರಾಜೀನಾಮೆ ನೀಡಿದ್ದಾಋಎ. ಡಿಜಿ – ಐಜಿಪಿಗೆ ರಾಜೀನಾಮೆ ಸಲ್ಲಿಸಿದ ಕರುನಾಡ ಸಿಂಗಂ ಅಣ್ಣಾಮಲೈ ತಾವು ಪೊಲೀಸ್ ವೃತ್ತಿಗೆ ಗುಡ್​ ಬೈ ಹೇಳುತ್ತಿರುವುದಾಗಿ ಹೇಳಿದ್ದಾರೆ.
ರಾಜೀನಾಮೆಗೆ ಫ್ಯಾಮಿಲಿ, ತಂದೆ ತಾಯಿ, ವೈಯಕ್ತಿಕ ಜೀವನವೇ ಕಾರಣ. 9 ವರ್ಷಗಳಿಂದ ಫ್ಯಾಮಿಲಿಗೆ ಟೈಂ ಕೊಟ್ಟಿಲ್ಲ. ವೃತ್ತಿಗೆ ಸೇರಿದ್ಮೇಲೆ ಅಟೆಂಡ್ ಮಾಡಿದ್ದು ಒಂದೇ ಒಂದು ಮದ್ವೆಯಂತೆ. ಜೀವನದ ಯಶಸ್ಸಿಗೆ ಕಾರಣರಾದವರ ಅಂತ್ಯಕ್ರಿಯೆಗೂ ಹೋಗೋಕ್ಕಾಗಿಲ್ಲ . ಇಂತಹ ಬದುಕಿಗಿಂತ ಪ್ರೀತಿಪಾತ್ರರ ಜೊತೆಗಿರುವುದೇ ಮೇಲು ಎಂದು ಅಣ್ಣಾಮಲೈ ಹೇಳಿಕೊಂಡಿದ್ದಾರೆ. ಪ್ರೀತಿ ಪಾತ್ರರಿಂದ ದೂರ ಇರುವ ನೋವು ಕಾಡ್ತಾನೇ ಇರತ್ತಂತೆ. ತಂದೆ ತಾಯಿ, ಬಂಧು ಬಳಗ ಎಲ್ಲಾ ಊರಲ್ಲಿ ಇದ್ದಾರೆ. ನಾನು ಇಲ್ಲಿದ್ದು ಏನ್ ಮಾಡ್ಲಿ ಅನ್ನೋ ಪ್ರಶ್ನೆ ಕಾಡ್ತಾನೇ ಇತ್ತಂತೆ, ಹೀಗಾಗಿ, ಹುದ್ದೆ ತೊರೆಯಲು ನಿರ್ಧರಿಸಿದೆ ಎನ್ನುತ್ತಾರೆ ಅಣ್ಣಾಮಲೈ.

ಸಿಂಗಂ ಬದುಕು ಬದಲಾಯಿಸಿದ ಹಿಮಾಲಯ ಚಾರಣ !

ಬದುಕೆಂದರೆ ಬರೀ ಖಾಕಿಯಲ್ಲ ಎಂದು ಕಂಡುಕೊಂಡ ಸಿಂಗಂ, ಮಾನಸ ಸರೋವರ ಯಾತ್ರೆ ವೇಳೆ ಆತ್ಮವಿಮರ್ಶೆ ಮಾಡಿಕೊಂಡ್ರಂತೆ ಅಣ್ಣಾಮಲೈ. ಐಪಿಎಸ್​ ಅಧಿಕಾರಿ ಮಧುಕರ್ ಶೆಟ್ಟಿ ಸಾವು ತುಂಬಾನೇ ನೋವು ಕೊಟ್ಟಿತ್ತು. ಅದರಿಂದ ತುಂಬಾ ಮನನೊಂದಿದ್ದೆ. ಬದುಕು ಇಷ್ಟೇನಾ ಎನ್ನಿಸಿದ್ದು ಆಗಲೇ ಅಂತ ಅಣ್ಣಾಮಲೈ ಹೇಳಿಕೊಂಡಿದ್ದಾರೆ. ಎಲ್ಲಾ ಒಳ್ಳೆಯ ಕೆಲಸಕ್ಕೂ ಒಂದು ಅಂತ್ಯ ಇರಲೇ ಬೇಕು. ಖಾಕಿ ಜೊತೆಗಿನ ನನ್ನ ಬದುಕು ಇಲ್ಲಿಗೆ ಕೊನೆಯಾಗುವುದು ಉತ್ತಮ ಎಂದು ಅವರು ಪ್ರತಿಪಾದಿಸಿದ್ದಾರೆ.

Add Comment