ಟ್ರೋಲ್ ಆಗ್ತಿರೋದೇಕೆ ಈ ಸಖತ್ ಸಂಸದರು? ಸಂಸತ್ ಮುಂದೆ ಮಾಡಿದ್ದೇನು?

ಕನ್ನಡದ ಖ್ಯಾತ ನಟ ದರ್ಶನ್‌ ಅವರ ಜೊತೆ ‘ದರ್ಶನ್‌’ ಚಿತ್ರದಲ್ಲಿ ನಟಿಸಿದ್ದ ನಟಿ ನವನೀತ್‌ ಕೌರ್‌ ರಾಣಾ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹೌದು, ಯುವ ಸ್ವಾಭಿಮಾನ ಪಕ್ಷದ ಅಭ್ಯರ್ಥಿಯಾಗಿ ಅಮರಾವತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನವನೀತ್‌ ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ. ನವನೀತ್‌, 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶಿವಸೇನೆಯ ಆನಂದ್‌ರಾವ್‌ ಅವರನ್ನು 36000 ಮತಗಳಿಂದ ಸೋಲಿಸಿದ್ದಾರೆ.

ಮುಂಬೈನಲ್ಲಿ ಜನಿಸಿದ ನವನೀತ್‌ ಕೌರ್‌ ತಂದೆ-ತಾಯಿ ಪಂಜಾಬ್‌ ಮೂಲದವರಾಗಿದ್ದು, ತಂದೆ ಸೇನಾಧಿಕಾರಿಯಾಗಿದ್ದರು. ಪಿಯುಸಿ ಅಧ್ಯಯನ ಅರ್ಧಕ್ಕೆ ಕೈಬಿಟ್ಟು ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿ, ನಂತರ ಕನ್ನಡ, ತೆಲುಗು, ಮಲಯಾಳಿ, ಹಿಂದಿ ಮತ್ತು ಪಂಜಾಬಿ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.
ಅತ್ತ ಬಂಗಾಳದಿಂದಲೂ ಸ್ಟಾರ್ ನಟಿಯರಿಬ್ಬರು ಲೋಕಸಭೆ ಪ್ರವೇಶಿಸಿದ್ದಾರೆ. ಮಿನಿ ಚಕ್ರವರ್ತಿ ಮತ್ತು ನುಸ್ರತ್ ಜಹಾನ್ ಹೊರಜಗತ್ತಿಗೆ ಅಷ್ಟೊಂದು ಪರಿಚಯ ಇಲ್ದಿದ್ರೂ, ಬಂಗಾಳದಲ್ಲಂತೂ ಇವ್ರುಸಿಕ್ಕಾಪಟ್ಟೆ ಫೇಮಸ್. ಕಿರುತೆರೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸ್ರು ಮಾಡಿರೋ ಈ ಇಬ್ಬರು, ಹಾಟ್ ಬ್ಯೂಟಿಗಳೆಂದೇ ಫೇಮಸ್. ಆದ್ರೆ, ಸಂಸತ್​ಗೆ ಪ್ರಯಾಣಿಸಿರೋ ಖುಷಿಯಲ್ಲಿ, ಇವತ್ತು ಸಂಸತ್ ಆವರಣದಲ್ಲಿ ಸೆಲ್ಫಿ ತಗೆದುಕೊಂಡು ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗಿದ್ದಾರೆ.

ಇದು ಸಂಸತ್ ಆವರಣ, ಶೂಟಿಂಗ್ ಸೆಟ್ ಅಲ್ಲ ಅಂತ ನೆಟ್ಟಿಗರು ಕಾಲೆಳೆದಿದ್ದಾರೆ.

Add Comment