ಐಪಿಎಲ್-20: SRH ವಿರುದ್ಧ ಪಂಜಾಬ್ ಗೆ 12 ರನ್ ಗಳ ರೋಚಕ ಜಯ

ಕಳೆದ ರಾತ್ರಿ ಯುಎಇ ದೇಶದ ರಾಜಧಾನಿ ದುಬೈನಲ್ಲಿ ನಡೆದ ಮಹತ್ವದ ಐಪಿಎಲ್-20 ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 12 ರನ್ ಗಳ ರೋಮಾಂಚಕಾರಿ ಜಯ ಸಾಧಿಸಿದೆ.
ಪಂದ್ಯದ ಟಾಸ್ ಗೆದ್ದ SRH ನಾಯಕ ಡೇವಿಡ್ ವಾರ್ನರ್ ಮೊದಲು ಬೌಲ್ ಮಾಡಲು ನಿರ್ಧರಿಸಿದರು.
ಅದರಂತೆ ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 126 ರನ್ ಹಾಕಲು ಶಕ್ತವಾಯಿತು.
ಪಂಜಾಬ್ ಪರ ಓಪನರ್ ಗಳಾದ ನಾಯಕ ಕೆ.ಎಲ್.ರಾಹುಲ್ 27(27), ಮನ್ ದೀಪ್ 17(14) ಹಾಗೂ ಮಧ್ಯಮ ಕ್ರಮಾಂಕದ ಕ್ರಿಸ್ ಗೇಲ್ 20(20),ಪೂರನ್ 30(28),ಮ್ಯಾಕ್ಸ್ ವೆಲ್ 12(13) ರನ್ ಗಳಿಸಿದರು.
ಬಳಿಕ ಬ್ಯಾಟಿಂಗ್ ಆರಂಭಿಸಿದ SRH ಪರ ಓಪನರ್ ಗಳಾದ ನಾಯಕ ಡೇವಿಡ್ ವಾರ್ನರ್ ಬಿರುಸಿನ 35 ರನ್(20 ಎಸೆತ,3 ಬೌಂಡರಿ,2 ಸಿಕ್ಸರ್) ಹಾಗೂ ಜಾನಿ ಬೈರ್ ಸ್ಟೋ 19(20 ಎಸೆತ,4 ಬೌಂಡರಿ) ಉತ್ತಮ ಆರಂಭ ಒದಗಿಸಿ ಗೆಲುವನ್ನು ಸುಲಭವಾಗಿಸಿದ್ದರು. ಆದರೆ ಇಬ್ಬರೂ ಔಟಾಗಿ SRH ಒಟ್ಟು 3 ವಿಕೆಟ್ ಕಳೆದುಕೊಂಡು ಕಷ್ಟದಲ್ಲಿ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದ ಕರ್ನಾಟಕದ ಬ್ಯಾಟ್ಸ್ ಮನ್ ಮನೀಶ್ ಪಾಂಡೆ 15 ರನ್(29 ಎಸೆತ) ಹಾಗೂ ವಿಜಯ್ ಶಂಕರ್ 26 ರನ್ (27 ಎಸೆತ,4 ಬೌಂಡರಿ) ಗಳಿಸಿ ಸ್ಕೋರನ್ನು 100 ರನ್ ಗೆ ಕೊಂಡೊಯ್ದರು. ಅದರೆ ಮನೀಶ್ ಪಾಂಡೆ ಔಟಾಗುತ್ತಲೇ SRH ಸೋಲಿನತ್ತ ಪಯಣಿಸಿತು. ಬಳಿಕ ವಿಜಯ್ ಶಂಕರ್ ಸಹ ಔಟಾದರೂ SRH ತಂಡಕ್ಕೆ ಕಡೆಯ ಓವರ್ ವರೆಗೆ ಗೆಲುವಿನ ಅವಕಾಶವಿತ್ತು. ಆದರೆ ಕಡೆಯ ಓವರ್ ನಲ್ಲಿ ಅರ್ಶ್ ದೀಪ್ ಸಿಂಗ್ SRHನ 3 ಬಾಲಂಗೋಚಿ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 12 ರನ್ ಗಳ ರೋಚಕ ಜಯ ತಂದರು.
SRH ತಂಡ 19.5 ಓವರ್ ಗಳಲ್ಲಿ 114 ರನ್ ಗಳಿಗೆ ಆಲೌಟ್ ಆಗಿ ಪ್ಲೇ ಆಫ್ ಅವಕಾಶವನ್ನು ಬಹುತೇಕ ಕಳೆದುಕೊಂಡಿತು.
SRHನ ಪ್ರಮುಖ 3 ವಿಕೆಟ್ ಗಳಿಸಿದ ಪಂಜಾಬ್ ವೇಗಿ ಕ್ರಿಸ್ ಜೋರ್ಡಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ ಈ ಜಯದ ಮೂಲಕ ಒಟ್ಟು 11 ಪಂದ್ಯಗಳಲ್ಲಿ 5 ಜಯ,6 ಸೋಲು ಕಂಡು 10 ಪಾಯಿಂಟ್ ಗಳಿಸಿ 5 ನೇ ಸ್ಥಾನದಲ್ಲೇ ಉಳಿದಿದೆ.
ಆದರೆ SRH ತಂಡ 11 ಪಂದ್ಯಗಳಲ್ಲಿ 4 ಜಯ,7 ಸೋಲು ಕಂಡು 8 ಪಾಯಿಂಟ್ ಗಳಿಸಿ ಪ್ಲೇ ಆಫ್ ಸುತ್ತಿಗೆ ತಲುಪಲು ಅಸಾಧ್ಯ ಎನಿಸಿದೆ.
ಕೆ ಟಿವಿ ನ್ಯೂಸ್ ದುಬೈ

Add Comment