ಗಾಂಧಿ ಫ್ಯಾಮಿಲಿಗೆ ಎರಡೇ ನಿಮಿಷದಲ್ಲಿ 64 ಕೋಟಿ ಲಾಸ್ !

ಸೋನಿಯಾ ಗಾಂಧಿ ಕುಟುಂಬಕ್ಕೆ ಒಂದರ ಮೇಲೊಂದು ಆಘಾತ ಎದುರಾಗಿದೆ. ಜಾರಿ ನಿರ್ದೇಶನಾಲಯವು ನ್ಯಾಷನಲ್​ ಹೆರಾಲ್ಡ್ ಆಸ್ತಿ ಜಪ್ತಿ ಮಾಡಿದೆ. ಸುಬ್ರಮಣ್ಯನ್ ಸ್ವಾಮಿ ನೀಡಿದ ದೂರಿನ ತನಿಖೆ ನಡೆಸುತ್ತಿರುವ ಜಾರಿ ನಿರ್ದೆಶನಾಲಯ, ಇದೀಗ ನ್ಯಾಷನಲ್ ಹೆರಾಲ್ಡ್​ಗೆ ಸಂಬಂಧಿಸಿ, 64 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಂಡಿದೆ. ಸೋನಿಯಾ-ರಾಹುಲ್ ಒಡೆತನದಲ್ಲಿರುವ ನ್ಯಾಷನಲ್​ ಹೆರಾಲ್ಡ್ ಪತ್ರಿಕೆಯ ಮೊದಲು ಟ್ರಸ್ಟ್ ಹೆಸರನಲ್ಲಿತ್ತು. ಆದರೆ, ಅಕ್ರಮವಾಗಿ ಪತ್ರಿಕೆ ಮತ್ತು ಅದರ ಆಸ್ತಿಯನ್ನು ಸೋನಿಯಾ ಕುಟುಂಬ ತಮ್ಮ ಒಡೆತನಕ್ಕೆ ತೆಗೆದುಕೊಂಡಿದೆ ಎಂದು ಸ್ವಾಮಿ ದೂರು ದಾಖಲಿಸಿದ್ದರು. ಮತ್ತೊಂದೆಡೆ ಸೋನಿಯಾ ಅಳಿಯ ವಾದ್ರಾಗೋ ಇಡಿ ಸಂಕಷ್ಟ ಎದುರಾಗಿದೆ. ಭೂ ಹಗರಣ, ಹವಾಲಾ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದೆ.

Add Comment