ಐಪಿಎಲ್-20: RCB ವಿರುದ್ಧ CSKಗೆ 8 ವಿಕೆಟ್ ಜಯ

ಯುಎಇ ದೇಶದ ರಾಜಧಾನಿ ದುಬೈ ನಗರದ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್-20 ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು
ವಿಕೆಟ್ ಗಳಿಂದ ಸೋಲಿಸಿದೆ.
ಟಾಸ್ ಗೆದ್ದ RCB ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆರಿಸಿಕೊಂಡರು.
RCB ಓಪನರ್ ಗಳಾದ ದೇವದತ್ ಪಡಿಕ್ಕಲ್ ರನ್ ಹಾಗೂ ಆ್ಯರೋನ್ ಫಿಂಚ್ ಮೊದಲ ವಿಕೆಟ್ ಗೆ 31 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಫಿಂಚ್ 15 ರನ್ ಗಳಿಸಿ ಔಟಾದರು. ಬಳಿಕ ಸ್ಕೋರ್ 46 ಆಗಿದ್ದಾಗ ಮತ್ತೊಬ್ಬ ಓಪನರ್ ಪಡಿಕ್ಕಲ್ ಕೂಡ 22 ರನ್ ಗಳಿಸಿ ಔಟಾದರು. ಆದರೆ ಬಳಿಕ ನಾಯಕ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ 3ನೇ ವಿಕೆಟ್ ಗೆ 82 ರನ್ ಸೇರಿಸಿದರು.
ಆದರೆ ಕೊನೆಯಲ್ಲಿ ಕೊಹ್ಲಿ ಕೂಡ ಔಟಾದ ಪರಿಣಾಮ ಸ್ಕೋರ್ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಗೆ ಅಂತ್ಯವಾಯಿತು.
ಬಳಿಕ ಇನಿಂಗ್ಸ್ ಆರಂಭಿಸಿದ CSK ಮೊದಲ ವಿಕೆಟ್ ಗೆ 46 ರನ್ ಗಳಿಸಿದ್ದಾಗ ಡು ಪ್ಲೆಸಿಸ್ (25 ರನ್, 13 ಎಸೆತ) ವಿಕೆಟ್ ಕಳೆದುಕೊಂಡಿತು. ಆದರೆ ಬಳಿಕ ಮತ್ತೊಬ್ಬ ಓಪನರ್ ಋತುರಾಜ್ ಗಾಯಕ್ವಾಡ್ ಮತ್ತು ಅಂಬಟಿ ರಾಯುಡು 2ನೇ ವಿಕೆಟ್ ಗೆ 67 ರನ್ ಸೇರಿಸಿ ಚೆನ್ನೈ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆಗ ಅಂಬಟಿ ರಾಯುಡು 39 ರನ್(27 ಎಸೆತ) ಗಳಿಸಿ ಔಟಾದರು. ಬಳಿಕ ನಾಯಕ ಧೋನಿ ಓಪನರ್ ಋತುರಾಜ್ ಗಾಯಕ್ವಾಡ್ ಗೆ ಸಾಥ್ ನೀಡಿ ಚೆನ್ನೈ ತಂಡಕ್ಕೆ 8 ವಿಕೆಟ್ ಗಳ ಜಯ ತಂದಿತ್ತರು. ಗಾಯಕ್ವಾಡ್ ಅಜೇಯ 65 ರನ್(51 ಎಸೆತ,4 ಬೌಂಡರಿ,3 ಸಿಕ್ಸರ್) ಹಾಗೂ ಧೋನಿ ಅಜೇಯ 19 ರನ್ ಬಾರಿಸಿದ್ದರಿಂದ CSK 18.4 ಓವರ್ ಗಳಲ್ಲೇ ಕೇವಲ 2 ವಿಕೆಟ್ ನಷ್ಟಕ್ಕೆ 150 ರನ್ ಬಾರಿಸಿ ಗೆಲುವು ಸಾಧಿಸಿದ ತೃಪ್ತಿ ಹೊಂದಿತು. ಏಕೆಂದರೆ CSK ಈಗಾಗಲೇ ಪ್ಲೇ ಆಫ್ ತಲುಪುವ ಅವಕಾಶವನ್ನು ಕಳೆದುಕೊಂಡಿದೆ.
ಆದರೆ ಅಂತಿಮವಾಗಿ ಅಮೂಲ್ಯ 65 ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
ಈ ಗೆಲುವಿನ ಹೊರತಾಗಿಯೂ CSK 12 ಪಂದ್ಯಗಳಲ್ಲಿ 4 ಗೆಲುವು,8 ಸೋಲು ಕಂಡು ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಆದರೆ RCB ಮಾತ್ರ ಈ ಸೋಲಿನ ಹೊರತಾಗಿಯೂ 11 ಪಂದ್ಯಗಳಲ್ಲಿ 7 ಜಯ,4 ಸೋಲು ಕಂಡು ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಕೆ ಟಿವಿ ನ್ಯೂಸ್ ದುಬೈ

Add Comment