ಐಪಿಎಲ್-20: ಮುಂಬೈ ವಿರುದ್ಧ ರಾಜಸ್ತಾನಕ್ಕೆ 8 ವಿಕೆಟ್ ಜಯ

ಯುಎಇ ದೇಶದ ಅಬುಧಾಬಿ ನಗರದ ಕ್ರೀಡಾಂಗಣದಲ್ಲಿ ನಡೆದ ಭಾನುವಾರದ 2ನೇ ಐಪಿಎಲ್-20 ಲೀಗ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತವನ್ನು ಸುಲಭವಾಗಿ ತಲುಪಿದ ರಾಜಸ್ತಾನ್ ರಾಯಲ್ಸ್ ತಂಡ 8 ವಿಕೆಟ್ ಗಳ ಸುಲಭ ಜಯ ಸಾಧಿಸಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಕಿರನ್ ಪೊಲ್ಲಾರ್ಡ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು.
ಅದರಂತೆ‌ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗೆ 195 ರನ್ ಪೇರಿಸಿತು.
ಮುಂಬೈ ಪರ ಓಪನರ್ ಇಶಾನ್ ಕಿಶಾನ್ 37(36),ಸೂರ್ಯಕುಮಾರ್ ಯಾದವ್ 40(25),ಸೌರಭ್ ತಿವಾರಿ 34(25),ಹಾರ್ದಿಕ್ ಪಾಂಡ್ಯ ಅಜೇಯ 60(21 ಎಸೆತ, 2 ಬೌಂಡರಿ,7 ಸಿಕ್ಸರ್) ಬಾರಿಸಿ ತಂಡ ಬೃಹತ್ ಮೊತ್ತ ಪೇರಿಸಲು ಬಿರುಸಿನ ಬ್ಯಾಟಿಂಗ್ ನಡೆಸಿದರು.
ಆದರೆ ರಾಜಸ್ತಾನ್ ಪರ ವೇಗಿ ಜೊಫ್ರಾ ಅರ್ಚರ್ ಮತ್ತು ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಲಾ ಓವರ್ ಬೌಲ್ ಮಾಡಿ ಕ್ರಮವಾಗಿ 31 ಹಾಗೂ 30 ರನ್ ನೀಡಿ ತಲಾ 2 ವಿಕೆಟ್ ಗಳಿಸಿದರು.
ಬಳಿಕ ಬ್ಯಾಟಿಂಗ್ ಆರಂಭಿಸಿದ ರಾಜಸ್ತಾನ್ ರಾಯಲ್ಸ್ ಪರ ಓಪನರ್ ರಾಬಿನ್ ಉತ್ತಪ್ಪ ಆರಂಭದಲ್ಲೇ ಬಿರುಸಿನ ಆಟಕ್ಕಿಳಿಯಲು ಹೋಗಿ 13 ರನ್ ಬಾರಿಸಿ ಔಟಾದರು.
ಆಗ ಸ್ಕೋರ್ 13 ರನ್. ಓಪನರ್ ಬೆನ್ ಸ್ಟೋಕ್ಸ್ ಜೊತೆ ಬಿರುಸಿನ ಆಟಕ್ಕಿಳಿದಿದ್ದ ನಾಯಕ ಸ್ಟೀವನ್ ಸ್ಮಿತ್ ಸಹ 11 ರನ್ ಗಳಿಸಿ ಔಟಾದಾಗ ರಾಜಸ್ತಾನ್ ಸ್ಕೋರ್ 2 ವಿಕೆಟ್ ಗೆ 44 ರನ್. ಬಳಿಕ ಓಪನರ್ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ಅತಿ ವೇಗವಾಗಿ ರನ್ ಗಳಿಸಿ ರಾಜಸ್ತಾನ್ ತಂಡಕ್ಕೆ ಅಚ್ಚರಿ ಗೆಲುವು ತಂದರು.
ಬೆನ್ ಸ್ಟೋಕ್ಸ್ ಅಜೇಯ 107 ರನ್(60 ಎಸೆತ,14 ಬೌಂಡರಿ,3 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕದ ಸಂಜು ಸ್ಯಾಮ್ಸನ್ ಅಜೇಯ 54 ರನ್(31 ಎಸೆತ,4 ಬೌಂಡರಿ,3 ಸಿಕ್ಸರ್) ಬಾರಿಸಿ ರಾಜಸ್ತಾನ್ ರಾಯಲ್ಸ್ ಗೆ 18.2 ಓವರ್ ಗಳಲ್ಲೇ 196 ರನ್ ಗುರಿ ತಲುಪಿ 8 ವಿಕೆಟ್ ಗಳ ಸುಲಭ ಜಯ ತಂದರು.
ಕೊನೆಯಲ್ಲಿ ಸಹಜವಾಗೇ ಬಿರುಸಿನ ಅಜೇಯ ಶತಕ ಗಳಿಸಿ ರಾಜಸ್ತಾನ್ ರಾಯಲ್ಸ್ ಗೆ ಅಚ್ಚರಿ ಜಯ ತಂದ ಓಪನರ್ ಬೆನ್ ಸ್ಟೋಕ್ಸ್ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
ಈ ಗೆಲುವಿನ ಮೂಲಕ ರಾಜಸ್ತಾನ್ ರಾಯಲ್ಸ್ ಒಟ್ಟು 12 ಪಂದ್ಯಗಳಿಂದ 5 ಜಯ, 7 ಸೋಲು ಕಂಡು CSK ಹಿಂದೂಡಿ
7ನೇ ಸ್ಥಾನಕ್ಕೆರಿತು.
ಮುಂಬೈ ಇಂಡಿಯನ್ಸ್ ಈ ಸೋಲಿನ ಹೊರತಾಗಿಯೂ 11 ಪಂದ್ಯಗಳಲ್ಲಿ 7 ಜಯ,5 ಸೋಲು ಮೂಲಕ ರನ್ ರೇಟ್ ಆಧಾರದಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ.
ಕೆ ಟಿವಿ ನ್ಯೂಸ್ ಅಬುಧಾಬಿ

Add Comment