ಬಿಸಿಸಿಐನಿಂದ ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟ

ಇಡೀ ಜಗತ್ತನ್ನು ಮರಣಶಯ್ಯೆಯಲ್ಲಿ ಮಲಗಿಸಿ ಎಲ್ಲಾ ದೇಶಗಳಲ್ಲಿ ಆರ್ಥಿಕ ದುಸ್ಥಿತಿ ತಂದಿರುವ ಚೀನಾ ಮೂಲದ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಸೋಂಕು ಭಾರತದಲ್ಲಿ ವಿಪರೀತವಾಗಿ ಹರಡಿದೆ. ಇದೀಗ ವಿಶ್ವದ ಎರಡನೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಭಾರತ ದೇಶದಲ್ಲಿ ಈ ವರ್ಷ ನಡೆಯಬೇಕಿದ್ದ ಜನಪ್ರಿಯ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ) ದೇಶದಲ್ಲಿ ನಡೆಯುತ್ತಿದೆ.
ಆದರೆ ಐಪಿಎಲ್-20 ಲೀಗ್ ಮುಗಿಯಲು ಇನ್ನೂ ಕೇವಲ ತಲಾ 3 ಪಂದ್ಯಗಳನ್ನು ಆಡಬೇಕಿರುವ ಎಲ್ಲಾ 8 ತಂಡಗಳ ಪ್ಲೇ ಆಫ್ ಸುತ್ತಿನ ಪಂದ್ಯಗಳ ದಿನಾಂಕ ಇನ್ನೂ ನಿಗದಿಯಾಗಿರಲಿಲ್ಲ.
ಆದರೆ ಕೊನೆಗೂ ಬಿಸಿಸಿಐ ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ತಲಾ 14 ಪಂದ್ಯಗಳಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯಲಿರುವ ತಂಡಗಳ ನಡುವೆ 1ನೇ ಕ್ವಾಲಿಫೈಯರ್ ಪಂದ್ಯ ನವೆಂಬರ್ 5 ರಂದು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿದೆ.
ಇದೇ ರೀತಿ ಐಪಿಎಲ್-20 ಲೀಗ್ ನಲ್ಲಿ 3ನೇ ಹಾಗೂ 4ನೇ ಸ್ಥಾನ ಪಡೆಯಲಿರುವ ತಂಡಗಳು ನವೆಂಬರ್ 6 ರಂದು ಸಂಜೆ 7:30ಕ್ಕೆ ಅಬುಧಾಬಿಯಲ್ಲಿ ಆರಂಭವಾಗಲಿರುವ ಎಲಿಮಿನೇಟರ್
ಪಂದ್ಯದಲ್ಲಿ ಸೆಣಸಾಡಲಿವೆ.
ಬಳಿಕ ನವೆಂಬರ್ 8 ರಂದು ಸಂಜೆ 7:30ಕ್ಕೆ ಅಬುಧಾಬಿಯಲ್ಲಿ
ನಡೆಯಲಿರುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತ ತಂಡ ಮತ್ತು ಕ್ವಾಲಿಫೈಯರ್-1ರಲ್ಲಿ ಸೋತ ತಂಡ ಪರಸ್ಪರ ಮುಖಾಮುಖಿಯಾಗಲಿವೆ.
ತದನಂತರ ಅಂತಿಮವಾಗಿ ಐಪಿಎಲ್-20ರ ಫೈನಲ್ ಪಂದ್ಯ ನವೆಂಬರ್ 10ರಂದು ಸಂಜೆ 7:30ಕ್ಕೆ ಕ್ವಾಲಿಫೈಯರ್ 1ರ ವಿಜೇತ ತಂಡ ಮತ್ತು ಕ್ವಾಲಿಫೈಯರ್ 2 ರ ವಿಜೇತ ತಂಡ ಮಧ್ಯೆ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ.
ಕೆ ಟಿವಿ ನ್ಯೂಸ್

Add Comment