ಎಣ್ಣೆ ಪಾರ್ಟಿ-ಊಟ ಮಾಡಿ ಸ್ನೇಹಿತನನ್ನೇ ಇರಿದು ಕೊಂದಿದ್ದ ಕೇಸ್-ಇಬ್ಬರು ಅರೆಸ್ಟ್

ಸ್ಮೇಹಿತರೇ ತಡರಾತ್ರಿಯವರೆಗೆ ಮದ್ಯಪಾನ ಮಾಡಿ ಜೊತೆಗೆ ಊಟ ಸೇವಿಸಿ ನಂತರ ಅಮಾಯಕ ಸ್ನೇಹಿತನ ಮೇಲೆ ಜಗಳ
ತೆಗೆದು ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಸರಘಟ್ಟ ರಸ್ತೆಯ ದಾಸೇನಹಳ್ಳಿ ಗ್ರಾಮದ ಪಾರ್ವತಿನಗರದಲ್ಲಿರುವ ನೀಲಗಿರಿ ತೋಪಿನಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಬೆಂಗಳೂರಿನ ಲಗ್ಗೆರೆಯ ನಿವಾಸಿ ಸಿ.ಕೆ.ದೇವೆಗೌಡ ಅವರ ಪುತ್ರ ಮಹೇಶ್ ಗೌಡ ಎಂದು ಗುರುತಿಸಲಾಗಿದೆ. ಅಕ್ಟೋಬರ್ 21 ರಂದು ರಾತ್ರಿ ಬೆಂಗಳೂರಿನ ಲಗ್ಗೆರೆಯ ಮನೆಯಲ್ಲಿ ಮಹೇಶ್ ಗೌಡ ಊಟ ಮಾಡಿ ಬಳಿಕ ಲಗ್ಗೆರೆಯಲ್ಲೇ ಇದ್ದ ತನ್ನ ಐವರು ಸ್ನೇಹಿತರನ್ನು ಭೇಟಿಯಾಗಿದ್ದಾನೆ. ಬಳಿಕ ಆ ಐವರು ಸ್ನೇಹಿತರೂ ಉಪಾಯ ಮಾಡಿ ಮಹೇಶ್ ಗೌಡನನ್ನು ಓಲೈಸಿ ಇನ್ನೋವಾ ಕಾರಿನಲ್ಲಿ ಹೆಸರಘಟ್ಟ ರಸ್ತೆಯ ದಾಸೇನಹಳ್ಳಿ ಗ್ರಾಮದ ಪಾರ್ವತಿನಗರದ
ನೀಲಗಿರಿ ತೋಪಿನಲ್ಲಿರುವ ಪ್ರೀತಿ ಬಾರ್ ನಲ್ಲಿ ಚೆನ್ನಾಗಿ ಮದ್ಯಪಾನದ ಪಾರ್ಟಿ ಮಾಡಿದ್ದಾರೆ. ನಂತರ ಎಲ್ಲರೂ ಊಟ ಮಾಡಿದ್ದಾರೆ. ಬಳಿಕ ಹತ್ತಿರದ ನೀಲಗಿರಿ ತೋಪಿನಲ್ಲಿ ತಮ್ಮ ಪ್ಲಾನ್ ಪ್ರಕಾರ ಮಹೇಶ್ ಗೌಡನ ಮೇಲೆ ಜಗಳ ತೆಗೆದು ವಾಕ್ಸಮರ ನಡೆಸಿದ್ದಾರೆ. ಹೀಗೆ ಜಗಳವಾಡಿ ಆ ಐವರು ಸ್ನೇಹಿತರೂ ಒಟ್ಟಾಗಿ ಸೇರಿ ಮಾರಕಾಸ್ತ್ರಗಳಿಂದ ಮಹೇಶ್ ಗೌಡನನ್ನು ಮಾರಕಾಸ್ತ್ರಗಳಿಂದ ಕೊಚ್ಷಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ದಾಸೇನಹಳ್ಳಿ ಗ್ರಾಮಸ ಸರ್ವೇ ನಂಬರ್ ನಲ್ಲಿ ಗುಂಡಿ ತೆಗೆದು ಮುಚ್ಚಿ ಹೂತು ಬಂದಿದ್ದಾರೆ.
ಬಳಿಕ ಮಗ ಎಲ್ಲೂ ಕಾಣದೆ ಹೋದಾಗ ಗಾಬರಿಯಾದ ತಂದೆ ಸಿ.ಕೆ.ದೇವೆಗೌಡರು ರಾಜಗೋಪಾಲನಗರ ಠಾಣೆಗೆ ವಿಷಯ ತಿಳಿಸಿದ್ದಾರೆ. ನಂತರ ತಕ್ಷಣವೇ ಕಾರ್ಯಪ್ರವೃತ್ತರಾದ ರಾಜಗೋಪಾಲನಗರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ರೆಡ್ಡಿ ನೇತೃತ್ವದ ಪೊಲೀಸರ ತಂಡ ಅಕ್ಟೋಬರ್ 21ರ ಮಧ್ಯರಾತ್ರಿ ಹೆಸರಘಟ್ಟ ರಸ್ತೆಯ ಪಾರ್ವತಿನಗರದ ಪ್ರೀತಿ ಬಾರ್ ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ರಹಸ್ಯವನ್ನು ಬಯಲಿಗೆಳೆದಿದ್ದಾರೆ. ಅಷ್ಟೇ ಅಲ್ಲ,ಆ ಎಣ್ಣೆ ಪಾರ್ಟಿಯಲ್ಲಿ ಕುಡಿದು ಜೊತೆ ಜೊತೆಗೆ ಊಟ ಮಾಡಿ ನಂತರ ಯಾವುದೋ ವಿಷಯಕ್ಕೆ ಬೇಕಂತಲೇ ಜಗಳ ತೆಗೆದ ಆ ಐವರೂ ಸ್ನೇಹಿತರು ಮಹೇಶ್ ಗೌಡನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ದಾಸೇನಹಳ್ಳಿ ಗ್ರಾಮದ ಸರ್ವೇ ನಂಬರ್ ಒಂದರಲ್ಲಿ ಗುಂಡಿ ತೆಗೆದು ಮುಚ್ಚಿ ಬಂದ ಆ ಐವರೂ ಇನ್ನೋವಾ ಕಾರಿನಲ್ಲಿ ಪರಾರಿಯಾಗಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಾಜಗೋಪಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿದ್ದಾರೆ. ನಂತರ ವೈದ್ಯರು,ಪೊಲೀಸರು ಸಹ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಮದ್ಯದ ಬಾಟಲುಗಳು ಪೊಲೀಸರಿಗೆ ಸಿಕ್ಕಿವೆ.
ಆದರೆ ರಾಜಗೋಪಾಲನಗರ ಠಾಣೆ ಇನ್ಸ್ ಪೆಕ್ಟರ್ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಸಿ ಶೋಧಿಸಿದಾಗ ಆ ಐವರು ಕೊಲೆಗಾರರ ಪೈಕಿ ಇಬ್ಬರು ಕೊಲೆಗಾರರಾದ ಕೃಷ್ಣ ಅಲಿಯಾಸ್ ಪಪ್ಪಿ ಮತ್ತು ಆರ್.ಎಂ.ಸಿ.ರವಿ ಅವರನ್ನು ಬಂಧಿಸಿದೆ.
ಈ ಕೊಲೆಯನ್ನು ಸುಪಾರಿ ಪಡೆದು ಕೊಲೆ ಮಾಡಲಾಗಿದೆ ಎಂದು ಶಂಕಿಸಿರುವ ರಾಜಗೋಪಾಲನಗರ ಠಾಣೆ ಪೊಲೀಸರು ಇದೀಗ ತಲೆಮರೆಸಿಕೊಂಡಿರುವ ಇತರೆ ಮೂವರು ಆರೋಪಿಗಳ ಬಂಧನಕ್ಕೂ ಬಲೆ ಬೀಸಿದ್ದಾರೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment