ರಾಜ್ಯದ 4 ವಿಧಾನಪರಿಷತ್ ಕ್ಷೇತ್ರಗಳ ಚುನಾವಣಾ ಪ್ರಚಾರ ಅಂತ್ಯ

ರಾಜ್ಯದ 4 ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಗೆ ಸೋಮವಾರ ಸಂಜೆ 5 ಗಂಟೆಗೆ ಪ್ರಚಾರ ಕಾರ್ಯ ಅಂತ್ಯವಾಯಿತು.
ಆದ್ದರಿಂದ ಅಕ್ಟೋಬರ್ 28 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 27 ರಿಂದ ಅಕ್ಟೋಬರ್ 28 ಸಂಜೆ 5 ಗಂಟೆಯವರೆಗೆ ಈ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗಳ ಜಿಲ್ಲೆಗಳಲ್ಲಿ ಯಾವುದೇ ಸ್ಕ್ಯಾನಿಂಗ್, ಜೆರಾಕ್ಸ್, ಕಂಪ್ಯೂಟರ್ ಗಳನ್ನು ಮುಚ್ಚುವಂತೆ ಎಂದು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ 4 ವಿಧಾನಪರಿಷತ್ ಕ್ಷೇತ್ರಗಳಲ್ಲಿ ಮತದಾನ ಮಾಡಲು ಮತದಾರರು ಗುರುತಿನ ಚೀಟಿ ಇಲ್ಲದಿದ್ದರೆ ಈ ಕೆಳಕಂಡ 9 ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
1. ಆಧಾರ್ ಕಾರ್ಡ್.
2. ಡ್ರೈವಿಂಗ್ ಲೈಸೆನ್ಸ್.
3. ಆದಾಯ ತೆರಿಗೆ ಗುರುತಿನ ಚೀಟಿ.
4. ರಾಜ್ಯ-ಕೇಂದ್ರಸರ್ಕಾರಗಳ/ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳ ಕೆಲಸಗಾರರಿಗೆ ನೀಡಿರುವ ಭಾವಚಿತ್ರ ಇರುವ ಸೇವಾ ಗುರುತಿನ ಚೀಟಿ.
ಇದೇ ವೇಳೆ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ವಿಧಾನಪರಿಷತ್ ಸದಸ್ಯರಿಗೆ ನೀಡಲಾದ ಸಂಬಂಧಪಟ್ಟ ಶಿಕ್ಷಕರ ಕ್ಷೇತ್ರ,ಪದವೀಧರ ಕ್ಷೇತ್ರಗಳ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತದಾರರಿಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ನೀಡಲಾದ ಸೇವಾ ಗುರುತಿನ ಚೀಟಿಗಳು,
ವಿಶ್ವವಿದ್ಯಾಲಯದಿಂದ ನೀಡಲಾದ ಪದವಿ,ಡಿಪ್ಲಮೊ ಪ್ರಮಾಣಪತ್ರದ ಮೂಲ ಪ್ರತಿ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪ್ರಮಾಣಪತ್ರದ ಮೂಲ ಪ್ರತಿಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ.
ಇದೇ ವೇಳೆ ಅಕ್ಟೋಬರ್ 26 ರ ಸಂಜೆ 5 ಗಂಟೆಯಿಂದ ಯಾವುದೇ ಮಾಧ್ಯಮಗಳು ಈ 4 ವಿಧಾನಪರಿಷತ್ ಕ್ಷೇತ್ರಗಳ ಚುನಾವಣಾ ಅಭ್ಯರ್ಥಿಗಳ ಸಂದರ್ಶನ-ಮತದಾರರ ಓಲೈಕೆ,ಚುನಾವಣೆ ಸಮೀಕ್ಷೆಗಳನ್ನು ನಡೆಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.
ಕೆ ಟಿವಿ ನ್ಯೂಸ್

Add Comment