ಐಪಿಎಲ್- 20: KKR ವಿರುದ್ಧ ಗೆದ್ದ ಪಂಜಾಬ್ ಗೆ ಸತತ 5ನೇ ಜಯ

ಯುಎಇ ದೇಶದ ಶಾರ್ಜಾದಲ್ಲಿ ಸೋಮವಾರ ನಡೆದ ಐಪಿಎಲ್-20 ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೊಲ್ಕತಾ ನೈಟ್ ರೈಡರ್ಸ್ ತಂಡವನ್ನು 8 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ‌ ಕೆ.ಎಲ್.ರಾಹುಲ್ ಮೊದಲು ಬೌಲಿಂಗ್ ನಡೆಸಲು ನಿರ್ಧರಿಸಿದರು.
ಇದಕ್ಕೆ ಸರಿ ಎಂಬಂತೆ ಕೆಕೆಆರ್ ತಂಡದ ಮೊದಲ 3 ವಿಕೆಟ್ ಗಳನ್ನು ಕೇವಲ 2 ಓವರ್ ಗಳಲ್ಲಿ 10 ರನ್ ನೀಡಿ ಪಂಜಾಬ್ ಪಡೆಯಿತು. ಆದರೆ ಆಗ ಓಪನರ್ ಶುಭ್ ಮಾನ್ ಗಿಲ್ ಮತ್ತು ನಾಯಕ ಇಯಾನ್ ಮಾರ್ಗನ್ ಸೇರಿ 4 ವಿಕೆಟ್ ಗೆ 81 ರನ್ ಸೇರಿಸಿದರು. ಆಗ ಸ್ಕೋರ್ 9.4 ಓವರ್ ಗಳಲ್ಲಿ 91 ರನ್ ಆಗಿತ್ತು. ಆದರೆ ನಾಯಕ ಮಾರ್ಗನ್ 40 ರನ್ (25 ಎಸೆತ,5 ಬೌಂಡರಿ,2 ಸಿಕ್ಸರ್) ಗಳಿಸಿ ಔಟಾಗುತ್ತಿದ್ದಂತೆಯೇ KKR ತಂಡ ಕುಸಿತ ತಾಳಲಾರದೆ ರನ್ ಗಳಿಸಲು ಒದ್ದಾಡಿತು.
ಬರಬರುತ್ತಾ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿದ KKR ತಂಡಕ್ಕೆ ಓಪನರ್ ಶುಭ್ ಮಾನ್ ಗಿಲ್ 57 ರನ್(45 ಎಸೆತ,3 ಬೌಂಡರಿ,4 ಸಿಕ್ಸರ್) ಬಾರಿಸಿ ಔಟಾದಾಗ ಸ್ಕೋರ್ 18.3 ಓವರ್ ಗಳಲ್ಲಿ 8 ವಿಕೆಟ್ ಗೆ 136 ರನ್. ಹೀಗಾಗಿ 20 ಓವರ್ ಗಳಲ್ಲಿ KKR ತಂಡ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂಜಾಬ್ ಪರ ವೇಗಿಗಳಾದ ಮೊಹಮ್ಮದ್ ಶಮ್ಮಿ 4-0-35-3 ವಿಕೆಟ್ ಹಾಗೂ ಮ್ಯಾಕ್ಸ್ ವೆಲ್ 2-0-21-1 ವಿಕೆಟ್ ಗಳಿಸಿದರೆ , ಮತ್ತೊಬ್ಬ ವೇಗಿ ಕ್ರಿಸ್ ಜೊರ್ಡಾನ್ 4-0-25-2 ವಿಕೆಟ್ ಗಳಿಸಿ ಪಂಜಾಬ್ ತಂಡಕ್ಕೆ ಮೇಲುಗೈ ಒದಗಿಸಿದರು.
ಸ್ಪಿನ್ನರ್ ಗಳಾದ ರವಿ ಬಿಷ್ಣೋಯಿ 4-0-20-2 ವಿಕೆಟ್ ಹಾಗೂ ಎಂ.ಅಶ್ವಿನ್ 4-0-27-1 ವಿಕೆಟ್ ಪಡೆದು ಯಶಸ್ವಿ ಬೌಲಿಂಗ್ ಪ್ರದರ್ಶನ ನೀಡಿದರು.
ಬಳಿಕ 150 ರನ್ ಗಳ ಗುರಿ ಬೆನ್ನತ್ತಿದ ಪಂಜಾಬ್ ಪರ ನಾಯಕ ಕೆ.ಎಲ್.ರಾಹುಲ್ ಮತ್ತು ಮನ್ ದೀಪ್ ಸಿಂಗ್ 8 ಓವರ್ ಗಳಲ್ಲಿ 47 ರನ್ ಸೇರಿಸಿದರು. ಆದರೆ ಕೆ.ಎಲ್.ರಾಹುಲ್ 28 ರನ್ (25 ಎಸೆತ,4 ಬೌಂಡರಿ) ಗಳಿಸಿದ್ದಾಗ ಔಟಾದರು. ಆದರೆ ಬಳಿಕ ಕ್ರೀಸ್ ಗೆ ಬಂದ ಕ್ರಿಸ್ ಗೇಲ್ ತಮ್ಮ ಎಂದಿನ ಹೊಡೆತಗಳನ್ನು ಪ್ರದರ್ಶಿಸಿ ರಂಜಿಸಿದರು.
ಅಂತಿಮವಾಗಿ 18 ನೇ ಓವರ್ ನ ಮೊದಲ ಎಸೆತದಲ್ಲಿ ಔಟಾಗುವ ಮುನ್ನ ಕ್ರಿಸ್ ಗೇಲ್ ಮಹತ್ವದ 51 ರನ್ (29 ಎಸೆತ,2 ಬೌಂಡರಿ,5 ಸಿಕ್ಸರ್) ಬಾರಿಸಿ ಔಟಾದಾಗ ಪಂಜಾಬ್ ಸ್ಕೋರ್ ಕೇವಲ 2 ವಿಕೆಟ್ ಗೆ 147 ರನ್ ಆಗಿತ್ತು. ಆದ್ದರಿಂದ ಕೊನೆಯಲ್ಲಿ ಪಂಜಾಬ್ 18.5 ಓವರ್ ಗಳಲ್ಲಿ 150 ರನ್ ಗಳಿಸಿ 6ನೇ ಜಯ ದಾಖಲಿಸಿತು.
ಪಂಜಾಬ್ ಪರ ಓಪನರ್ ಮನ್ ದೀಪ್ ಸಿಂಗ್ ಅಜೇಯ 66 ರನ್(56 ಎಸೆತ,8 ಬೌಂಡರಿ,2 ಸಿಕ್ಸರ್) ಗಳಿಸಿದ್ದೂ ಸಹ ಮಹತ್ವದ ಗೆಲುವಿಗೆ ಕಾರಣವಾಯಿತು.
ಅಂತಿಮವಾಗಿ ಪಂದ್ಯವನ್ನು ಸಿಕ್ಸರ್,ಬೌಂಡರಿಗಳ ಮೂಲಕ ಪಂಜಾಬ್ ನತ್ತ ತಿರುಗಿಸಿದ ಕ್ರಿಸ್ ಗೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಒಟ್ಟಾರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ಪಂದ್ಯಗಳಲ್ಲಿ 6 ಜಯ,6 ಸೋಲು ಕಂಡು ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು. ಮೊದಲ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು, 6 ರಲ್ಲಿ ಸೋತಿದ್ದ ಪಂಜಾಬ್ 2ನೇ ಸರದಿಯ ಐದೂ ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಲು ಪ್ರಬಲ ಪೈಪೋಟಿ ನೀಡಿದೆ.
ಆದರೆ KKR ತಂಡ 12 ಪಂದ್ಯಗಳಲ್ಲಿ 6 ಜಯ,6 ಸೋಲು ಕಂಡು ರನ್ ರೇಟ್ ಆಧಾರದ ಮೇಲೆ ಪಾಯಿಂಟ್ ಪಟ್ಟಿಯಲ್ಲಿ
4 ರಿಂದ 5ನೇ ಸ್ಥಾನಕ್ಕೆ ಕುಸಿದಿದೆ.
ಕೆ ಟಿವಿ ನ್ಯೂಸ್ ಶಾರ್ಜಾ

Add Comment