ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ

ಮುಂದಿನ ನವೆಂಬರ್ ನಿಂದ ಜನವರಿಯವರೆಗೆ ನಡೆಯಲಿರುವ ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸಕ್ಕೆ ಕರ್ನಾಟಕದ ಕೆ.ಎಲ್.ರಾಹುಲ್,ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ.
ಭಾರತ ಕ್ರಿಕೆಟ್ ತಂಡ ನವೆಂಬರ್ ನಿಂದ ಜನವರಿಯವರೆಗಿನ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಏಕದಿನ, 3 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ.‌
ಮಾಜಿ ನಾಯಕ ಧೋನಿಯಂತೆ ಬ್ಯಾಟ್ಸ್ ಮನ್ ಜೊತೆಗೆ ವಿಕೆಟ್ ಕೀಪರ್ ಆಗಿರುವ ಕಾರಣ ಕರ್ನಾಟಕದ ಕೆ.ಎಲ್.ರಾಹುಲ್ ಅವರು ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಭಾರತ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಏಕೆಂದರೆ ಸದ್ಯ ಯುಎಇ ದೇಶದಲ್ಲಿ ನಡೆಯುತ್ತಿರುವ ಐಪಿಎಲ್-20 ಟೂರ್ನಿಯಲ್ಲಿ ಕೆ.ಎಲ್.ರಾಹುಲ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಓಪನಿಂಗ್ ಬ್ಯಾಟ್ಸ್ ಮನ್ ಆಗಿ 595 ರನ್ ಗಳಿಸಿ ಗರಿಷ್ಠ ರನ್ ಗಳಿಸಿದ ಆರೆಂಜ್ ಕ್ಯಾಪ್ ಧರಿಸಿದ್ದಾರೆ. ಅಷ್ಟೇ ಅಲ್ಲದೆ ಪಂಜಾಬ್ ತಂಡಕ್ಕೆ ಕಳೆದ 5 ಪಂದ್ಯಗಳಲ್ಲೂ ಗೆಲುವು ತಂದುಕೊಟ್ಟ ನಾಯಕತ್ವದ ಹೊಣೆಗಾರಿಕೆಯನ್ನು ಬಹಳ ಮುತುವರ್ಜಿಯಿಂದ ಕೆ.ಎಲ್.ರಾಹುಲ್ ವಹಿಸಿದ್ದಾರೆ.
ಸದ್ಯ ಐಪಿಎಲ್-20 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದ ರೋಹಿತ್ ಶರ್ಮಾ ಗಾಯದಿಂದ ಐಪಿಎಲ್ ಜೊತೆಗೆ ಆಸೀಸ್ ಪ್ರವಾಸಕ್ಕೂ ಅಲಭ್ಯರಾಗಿದ್ದಾರೆ. ರೋಹಿತ್ ಶರ್ಮಾ ಫಿಟ್ ಆಗಲು ವೇಗಿ ಇಶಾಂತ್ ಶರ್ಮಾ ಜೊತೆ ಬೆಂಗಳೂರಿನ ಎನ್.ಸಿ‌.ಎ.ಯಲ್ಲಿ ನಡೆಯಲಿರುವ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಕರ್ನಾಟಕದ ಓಪನಿಂಗ್ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಮತ್ತು ಮಧ್ಯಮ ಕ್ರಮಾಂಕದ ರಾಜ್ಯದ ಬ್ಯಾಟ್ಸ್ ಮನ್ ಮನೀಶ್ ಪಾಂಡೆ
ಸಹ ಮೂರೂ ಪ್ರಕಾರದ ವಿಭಾಗಗಳ ಪಟ್ಟಿಯಲ್ಲಿ ಭಾರತದ ಪರ ಆಡಲು ಆಯ್ಜೆಯಾಗಿದ್ದಾರೆ.
ಉಳಿದಂತೆ ಐಪಿಎಲ್-20 ಟೂರ್ನಿಯಲ್ಲಿ ಗರಿಷ್ಠ 23 ಸಿಕ್ಸರ್ ಗಳನ್ನು ಹೊಡೆದ ಕೀರ್ತಿಗೆ ಪಾತ್ರರಾಗಿರುವ ಕೇರಳದ ಸಂಜು ಸ್ಯಾಮ್ಸನ್ ಅವರು ಆಸ್ಟ್ರೇಲಿಯಾ ವಿರುದ್ಧದ 3 ಟಿ-20 ಪಂದ್ಯಗಳಿಗೆ 2ನೇ ವಿಕೆಟ್ ಕೀಪರ್ ಆಗಿ ಬ್ಯಾಟ್ಸ್ ಮನ್ ಆಗಿ ಆಯ್ಕೆಯಾಗಿದ್ದಾರೆ.
ಜೊತೆಗೆ ಐಪಿಎಲ್-20 ಟೂರ್ನಿಯ ಒಂದೇ ಪಂದ್ಯದಲ್ಲಿ ಕೆಕೆಆರ್ ಪರ 5 ವಿಕೆಟ್ ಪಡೆದ ಸಾಧನೆ ಮಾಡಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರೂ ಸಹ ಆಸ್ಟ್ರೇಲಿಯಾ ವಿರುದ್ಧದ 3
ಟಿ-20 ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
ಐಪಿಎಲ್-20 ಟೂರ್ನಿಯಲ್ಲಿ ಮಿಂಚುತ್ತಿರುವ ಓಪನಿಂಗ್ ಬ್ಯಾಟ್ಸ್ ಮನ್ ಶುಭಮಾನ್ ಗಿಲ್ ಮತ್ತು ಯುವ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಶುಭಮಾನ್ ಗಿಲ್ ಅವರು ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.
ಇದೇ ವೇಳೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟಿ- 20 ಮತ್ತು ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.
ಕುಲದೀಪ್ ಯಾದವ್ ಅವರು ಟೆಸ್ಟ್ ತಂಡದ 3ನೇ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ.
ಟಿ-20 ಟೀಂ ಇಂಡಿಯಾ : ವಿರಾಟ್ ಕೊಹ್ಲಿ(ನಾಯಕ),
ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್(ವಿಕೆಟ್ ಕೀಪರ್-ಉಪನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್(ಹೆಚ್ಚುವರಿ ವಿಕೆಟ್ ಕೀಪರ್),ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್,
ಜಸ್ ಪ್ರೀತ್ ಬುಮ್ರಾ,ಮೊಹಮ್ಮದ್ ಶಮಿ, ನವದೀಪ್ ಸೈನಿ,
ದೀಪಕ್ ಚಹರ್, ವರುಣ್ ಚಕ್ರವರ್ತಿ.

ಏಕದಿನ ಟೀಂ ಇಂಡಿಯಾ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಶುಭಮಾನ್ ಗಿಲ್, ಕೆ.ಎಲ್.ರಾಹುಲ್(ಉಪನಾಯಕ-ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ ಪ್ರೀತ್ ಬುಮ್ರಾ, ಮೊಹಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

ಟೀಂ ಇಂಡಿಯಾ ಟೆಸ್ಟ್ ತಂಡ: ವಿರಾಟ್ ಕೊಹ್ಲಿ(ನಾಯಕ),
ಮಯಾಂಕ್ ಅಗರ್ವಾಲ್, ಪೃಥ್ವಿ ಷಾ, ಕೆ.ಎಲ್.ರಾಹುಲ್,
ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ),
ಹನುಮ ವಿಹಾರಿ, ಶುಭಮಾನ್ ಗಿಲ್, ವೃದ್ಧಿಮಾನ್ ಸಾಹ(ವಿಕೆಟ್ ಕೀಪರ್),ರಿಷಬ್ ಪಂತ್(ವಿಕೆಟ್ ಕೀಪರ್-ಬ್ಯಾಟ್ಸ್ ಮನ್),ಜಸ್ ಪ್ರೀತ್ ಬುಮ್ರಾ, ಮೊಹಮದ್ ಶಮಿ,
ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮದ್ ಸಿರಾಜ್.
ಹೆಚ್ಚುವರಿ ಬೌಲರ್ ಗಳು: ಕಮಲೇಶ್‌ ನಾಗರಕೋಟಿ, ಕಾರ್ತಿಕ್ ತ್ಯಾಗಿ, ಇಶಾನ್ ಪೊರೆಲ್, ಟಿ.ನಟರಾಜನ್.
ಕೆ ಟಿವಿ ನ್ಯೂಸ್ ನವದೆಹಲಿ

Add Comment