ಬಿಎಸ್‌ವೈ ನಮ್ಮ ಪಾಲಿನ ಹೀರೋ-ಎಸ್.ಟಿ. ಸೋಮಶೇಖರ್

ಕೊರೋನಾ ಕಂಟ್ರೋಲ್ ಮಾಡಿದ ಸಿಎಂ ಬಿಎಸ್‌ವೈ ಅವರು ನಮ್ಮ ಪಾಲಿನ ಹೀರೋ ಎಂದು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯರಿಗೆ ಧಮ್ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಜೊತೆಗೆ ಸದನದ ಹೊರಗೊಂದು, ಒಳಗೊಂದು ಮಾತನಾಡುವ ಸಿದ್ದರಾಮಯ್ಯ ಅವರ ಧಮ್ ಏನೆಂದು ಗೊತ್ತು, ನಾನು ಅವರ ಜೊತೆ 5 ವರ್ಷ ಕೆಲಸ ಮಾಡಿದ್ದೇನೆ. ಸುಮ್ಮನೆ ನಮ್ಮ ಧಮ್ ಯಾಕೆ ಟೆಸ್ಟ್ ಮಾಡುತ್ತೀರಿ. ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಮಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ ನಿಜವಾದ ಹೀರೋ, 7 ತಿಂಗಳು ಕೊರೊನಾ ತಡೆಗೆ ಕ್ರಮ ಕೈಗೊಂಡಿದ್ದಾರೆ. ನೆರೆ ಪರಿಸ್ಥಿತಿಯನ್ನೂ ಸರಿಯಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.

Add Comment