ಹರಿಹರ: ಮಾಜಿ ಸಚಿವ ಡಾ.ವೈ.ನಾಗಪ್ಪ ನಿಧನ

ಹರಿಹರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಾ.ವೈ.ನಾಗಪ್ಪ(87) ಅವರು ಅನಾರೋಗ್ಯದಿಂದ ಹರಿಹರದ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ 8:10 ರ ವೇಳೆಗೆ ನಿಧನರಾಗಿದ್ದಾರೆ.
ಡಾ‌.ವೈ.ನಾಗಪ್ಪ ಅವರು 1989,1999,2004 ರ ವಿಧಾನಸಭಾ ಚುನಾವಣೆಗಳಲ್ಲಿ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು ಮತ್ತು 2004 ರ ಧರಂಸಿಂಗ್ ನೇತೃತ್ವದ
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮೃತ ಡಾ.ವೈ.ನಾಗಪ್ಪ ಅವರು ಓರ್ವ ಪುತ್ರ,ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳವಾರ ಸಂಜೆ 5 ಗಂಟೆಗೆ
ಹರಿಹರದಲ್ಲಿ ಪಾರ್ಥೀವಶರೀರದ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೆ ಟಿವಿ ನ್ಯೂಸ್ ಹರಿಹರ

Add Comment