ಜಮ್ಮು-ಕಾಶ್ಮೀರದಲ್ಲಿ ಭೂಕಾಯ್ದೆ ಅಧಿಸೂಚನೆ ಹೊರಡಿಸಿದ ಕೇಂದ್ರಸರ್ಕಾರ

ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿರುವ ಜಮ್ಮು-ಕಾಶ್ಮೀರದಲ್ಲಿ ಇನ್ನುಮುಂದೆ ಭಾರತದ ನಾಗರಿಕರೆಲ್ಲರೂ ಭೂಮಿ ಖರೀದಿಸಬಹುದು.
ಕೇಂದ್ರಸರ್ಕಾರ ಇಂದು ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಭೂ ಕಾಯ್ದೆಯ ಅಧಿಸೂಚನೆ ಹೊರಡಿಸಿ ದೇಶದ ಯಾವುದೇ ನಾಗರಿಕರು ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿಸಲು ಕಾನೂನು ಪ್ರಕಾರ ಅವಕಾಶ ಕಲ್ಪಿಸಿದೆ.
ಒಟ್ಟಾರೆ ಇದರಿಂದ ಸದಾ ಯುದ್ಧ ಮತ್ತು ಉಗ್ರಗಾಮಿಗಳ ಚಟುವಟಿಕೆಗಳ ತಾಣವಾಗಿದ್ದ ಜಮ್ಮು-ಕಾಶ್ಮೀರ ಇದೀಗ ಉದ್ಯಮದ ಸ್ವರ್ಗವಾಗುವ ದಿನಗಳನ್ನು ಎಣಿಸುತ್ತಿದೆ ಎನ್ನಬಹುದು. ಏಕೆಂದರೆ ಜಮ್ಮು-ಕಾಶ್ಮೀರದಲ್ಲಿ ಭೂಮಿಯನ್ನು ಕೊಳ್ಳಲು ರಿಯಲ್ ಎಸ್ಟೇಟ್ ಉದ್ಯಮಿಗಳು,ಕಂಪೆನಿಗಳು ಹಾಗೂ ಇತರೆ ಎಲ್ಲಾ ರೀತಿಯ ಉದ್ಯಮಗಳು ಆಸಕ್ತಿ ತೋರಿರುವ ಕಾರಣ ಕಾಶ್ಮೀರದ ಜನರಿಗೂ ಇದರಿಂದ ಭಾರಿ ಲಾಭ ಸಿಗುವ ಸಾಧ್ಯತೆಯಿದೆ.
ಕೆ ಟಿವಿ ನ್ಯೂಸ್ ನವದೆಹಲಿ

Add Comment