ಮುನಿರತ್ನ ರಾಜಕೀಯದಲ್ಲಿರಲು ನಾಲಾಯಕ್-ಸಿದ್ದರಾಮಯ್ಯ ವಾಗ್ದಾಳಿ

ಆರ್.ಆರ್. ನಗರ ಉಪಚುನಾವಣಾ ಅಖಾಡ ರಂಗೇರಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಪ್ರಚಾರ ಭರಾಟೆ ಜೋರಾಗಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಮತ ಬೇಟೆಗೆ ಆಗಮಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ರೋಡ್ ಶೋ ನಡೆಸಿದ ಸಿದ್ದರಾಮಯ್ಯ, ಮುನಿರತ್ನ ಕಾಂಗ್ರೆಸ್ ನಲ್ಲಿದ್ದು, ಪಕ್ಷಕ್ಕೆ ಚೂರಿ ಹಾಕಿದವರು. ನಮಗೆ ದ್ರೋಹ ಬಗೆದರು. ಇಂತವರು ರಾಜಕಿಯದಲ್ಲಿರಲು ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.

Add Comment