ಆನೇಕಲ್: ನೆರಿಗಾ ಗ್ರಾಮದಲ್ಲಿ 40 ಕೊರೊನಾ ಸೋಂಕಿತರು ಪತ್ತೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ಈವರೆಗೆ ಒಟ್ಟು 40 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈಗಾಗಲೇ ನೆರಿಗಾ ಗ್ರಾಮದ ಒಟ್ಟು 100 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 40 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆದ್ದರಿಂದ ನೆರಿಗಾ ಗ್ರಾಮದಲ್ಲೀಗ ಬರೀ ಕೆಮ್ಮು,ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಗ್ರಾಮಕ್ಕೆ ಬಂದ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳಿಗೂ ಸಹ ನೆರಿಗಾ ಗ್ರಾಮಸ್ಥರು ಮನೆಯ ಬಾಗಿಲು ತೆಗೆದು ಒಳಗೆ ಬನ್ನಿ ಎಂದು ಹೇಳದೆ ಮನೆಯ ಬಾಗಿಲು ಮುಚ್ಚಿ ಕೊರೊನಾ ಪರೀಕ್ಷೆಗೆ ಬರಲು ನಿರಾಕರಿಸುತ್ತಿದ್ದಾರೆ. ಆದರೆ ನೆರಿಗಾ ಗ್ರಾಮದಲ್ಲಿ ಕೆಮ್ಮುತ್ತಿರುವ ಜನರ ಶಬ್ದ ಜೋರಾಗಿ ಕೇಳಿಸುತ್ತಿದೆ. ಇದರಿಂದ ವೈದ್ಯಾಧಿಕಾರಿಗಳಿಗೆ ನೆರಿಗಾ ಗ್ರಾಮಸ್ಥರು ತಲೆನೋವಾಗಿ ಪರಿಣಮಿಸಿದ್ದಾರೆ.
ಕೆ ಟಿವಿ ನ್ಯೂಸ್ ಆನೇಕಲ್

Add Comment