ಬೆಂಗಳೂರಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಓಪನ್..!

0

ಬೆಂಗಳೂರುಬೆಂಗಳೂರಿನ 243 ಕಡೆಯೂ ಇಂದಿರಾ ಕ್ಯಾಂಟೀನ್‌ ಆರಂಭಿಸುತ್ತೇವೆ. ತಿಂಡಿ ಬೆಲೆಯನ್ನು 5 ರಿಂದ 10 ರೂಪಾಯಿಗೆ ಏರಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಮರು ಆರಂಭಕ್ಕೆ ಸರ್ಕಾರ ಸೂಚಿಸಿದೆ.

ಕೆಲವು ಕಡೆ ಕ್ಯಾಂಟೀನ್‌ನಲ್ಲಿ ಆಹಾರಕ್ಕೆ ಬೇಡಿಕೆ ಕಡಿಮೆ ಇತ್ತು. ಕೆಲವೆಡೆ ಉತ್ತೇಜನ ಕಡಿಮೆ ಆಗಿತ್ತು ಅಂತಾ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿದ್ದವು. ಇರುವ ಕ್ಯಾಂಟೀನ್‌ಗಳ ಪೈಕಿ 10 ಮೊಬೈಲ್ ಕ್ಯಾಂಟೀನ್ ಕ್ಲೋಸ್ ಆಗಿದೆ ಎಂದು ತಿಳಿಸಿದರು.

ಸರ್ಕಾರದ ಸೂಚನೆ ಅನ್ವಯ ಬೆಂಗಳೂರಿನ 243 ಕಡೆಯೂ ಕ್ಯಾಂಟೀನ್ ಆರಂಭಿಸುತ್ತೇವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಇಂದಿರಾ ಕಿಚನ್‌ಗಳ ಅಡುಗೆ ಮನೆಯಲ್ಲಿನ ವಸ್ತುಗಳನ್ನು ಬದಲಾಯಿಸಬೇಕಿದೆ. ತಿಂಗಳೊಳಗೆ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸೋ ಗುರಿ ಹೊಂದಿದ್ದೇವೆ. ಟೆಂಡರ್ ಆದ ನಂತರ ಯಾರಿಗೆ ಎಂದು ನಿರ್ಧಾರ ಆಗಲಿದೆ ಎಂದರು.

ಮೊದಲು ತಿಂಡಿಯ ಪ್ರಮಾಣ ಕಡಿಮೆ ಇತ್ತು. ಈಗ ಅದನ್ನು ಹೆಚ್ಚು ಮಾಡಲು ನಿರ್ಧಾರ ಆಗಿದೆ. ತಿಂಡಿಯ ಬೆಲೆ ಕೂಡ 5 ರಿಂದ 10 ರೂಪಾಯಿಗೆ ಏರಿಕೆ ಮಾಡಲಾಗುತ್ತೆ. ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ ಇರುವುದರಿಂದ ಅದರ ಪ್ರಮಾಣ ಹಾಗೂ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಜಯರಾಂ ರಾಯ್‌ಪುರ್‌ ತಿಳಿಸಿದರು.

ಇಂದಿರಾ ಕ್ಯಾಂಟೀನ್ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಕ್ರಮ ಆಗಿರುವುದಕ್ಕಿಂತ ಹಣ ಪಾವತಿಯಾಗಿಲ್ಲ ಎನ್ನುವ ದೂರು ಕೇಳಿಬಂದಿದೆ. ಮಾರ್ಷಲ್ಸ್‌ ನೀಡುವ ಲೆಕ್ಕದ ಆಧಾರದ ಮೇಲೆ ಮೊತ್ತ ಪಾವತಿ ಮಾಡಿದ್ದೇವೆ. ಎರಡು ಮೂರು ವರ್ಷಗಳಿಂದ ಯಾವುದೇ ತೊಂದರೆ ಇಲ್ಲ. 120 ರಿಂದ 130 ಇಂದಿರಾ ಕ್ಯಾಂಟೀನ್ ಸುಸ್ಥಿತಿಯಲ್ಲಿವೆ. ತಿಂಗಳಲ್ಲಿ‌ ಟೆಂಡರ್ ಆಗಲಿದೆ, ಗುತ್ತಿಗೆದಾರರಿಗೆ ಹಳೇ ಪೇಮೆಂಟ್ ಕೂಡ ಆಗಲಿದೆ ಎಂದು ಮಾಹಿತಿ ನೀಡಿದರು.

About Author

Leave a Reply

Your email address will not be published. Required fields are marked *

You may have missed