ಗುರುವಾಯೂರಿನಲ್ಲಿ ಮೋದಿ ತಾವರೆ ತುಲಾಭಾರವೇಕೆ ? ಮೋದಿ ಹೊತ್ತ ಆ ಹರಕೆ ಏನು?

1 Star2 Stars3 Stars4 Stars5 Stars (No Ratings Yet)
Loading...

ಲೋಕಸಭೆ ಚುನಾವಣೆ ನಂತ್ರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿದ್ದಾರೆ. ಕಳೆದ ರಾತ್ರಿಯೇ ತ್ರಿಶೂರ್​​ಗೆ ಬಂದಿರೋ ನಮೋ ಬೆಳಿಗ್ಗೆ 9.30ಕ್ಕೆ ಗುರುವಾಯೂರಿನ ಶ್ರೀ ಕೃಷ್ಣನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದೇ ವೇಳೆ ದೇಗುಲಕ್ಕೆ ಆಗಮಿಸೋ ಮೋದಿಗೆ 112 KG ತಾವರೆಯ ಹೂಗಳಿಂದ ತುಲಾಭಾರ ನಡೆಸಲು ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದಾರೆ. ತಮಿಳುನಾಡಿನ ನಾಗರಕೊಯಿಲ್​​ನಿಂದ ತಾವರೆ ಹೂಗಳನ್ನು ತರಲಾಗಿದೆ.

2008ರಲ್ಲಿ ಗುಜರಾತ್​ ಸಿಎಂ ಆಗಿದ್ದಾಗಲೂ ತಾವರೆ ಹೂಗಳಿಂದಲೇ ಗುರುವಾಯೂರು ಕೃಷ್ಣನಿಗೆ ಕದಳಿ ಬಾಳೆಹಣ್ಣಿನಲ್ಲಿ ಮೋದಿ ತುಲಾಭಾರ ಸೇವೆ ಸಲ್ಲಿಸಿದ್ದರು. ಗುರುವಾಯೂರಪ್ಪನ ಬಲದ ಕೈಯಲ್ಲಿ ಕಮಲವಿದೆ. ಗುರುವಾಯೂರಪ್ಪಗೆ ‘ಅರವಿಂದ’ ‘ಅಕ್ಷ ‘ಎಂದು ಹೆಸರು. ಕಮಲದ ದಳದಂತೆ ಕಣ್ಣುಳ್ಳವ ಅನ್ನೋ ಕಾರಣಕ್ಕೆ ಈ ಹೆಸರು. ಪ್ರತಿ ದಿನ ಪೂಜೆಗೆ ಕಮಲದ ಹೂ ಬಳಕೆ ಮಾಡುತ್ತಾರೆ. ಇವತ್ತು ಮೋದಿ ಗುರುವಾಯೂರು ಕೃಷ್ಣನಿಗೆ ಅತ್ಯಂತ ಪ್ರೀತಿಪಾತ್ರವಾದ ಕಮಲದ ಹೂಗಳಿಂದಲೇ ತುಲಾಭಾರ ಸೇವೆ ಸಲ್ಲಿಸಲಿದ್ದಾರೆ. ಅಲ್ಲದೆ ಮಂಜಂಪಟ್ಟು, ಬಾಳೆಹಣ್ಣು, ಹಾಲು ಪಾಯಸವನ್ನು ಮೋದಿ ಶ್ರೀಕೃಷ್ಣನಿಗೆ ಒಪ್ಪಿಸಲಿದ್ದಾರೆ.

ಕೃಷ್ಣ ದರ್ಶನದ ನಂತರ ಕೇರಳ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಂದ ಮಧ್ಯಾಹ್ನ ವಾಪಸಾಗುವ ಮೋದಿ ಸಂಜೆ ತಮ್ಮ ಮಾಲ್ಡೀವ್ಸ್​, ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದ್ದಾರೆ. ಎರಡನೇ ಬಾರಿ ಪ್ರಧಾನಿಯಾದ ನಂತರ ಮೊದಲ ವಿದೇಶ ಪ್ರವಾಸಇದಾಗಿದೆ. ಜೂ 8 ಮತ್ತು 9ಕ್ಕೆ ಮಾಲ್ಡೀವ್ಸ್​, ಶ್ರೀಲಂಕಾಗೆ ಭೇಟಿ ನೀಡೋ ಮೋದಿ, ಶ್ರೀಲಂಕಾದಿಂದ ನೇರವಾಗಿ ಜೂ 9ರಂದು ತಿರುಪತಿಗೆ ಬರಲಿದ್ದಾರೆ. ತಿರುಮಲದಲ್ಲಿ ವೆಂಕಟೇಶ್ವರನ ದರ್ಶನ ಪಡೆಯುವ ನಮೋ ತಿರುಪತಿಯಲ್ಲೇ 5000 ಕಾರ್ಯಕರ್ತರ ಜತೆ ವಿಜಯೋತ್ಸವ ಸಭೆ ನಡೆಸಲಿದ್ದಾರೆ.

Add Comment