ಬೆಂಗಳೂರಿನ ಅಂಡರ್ ಪಾಸ್ ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿಲ್ಲ: ತುಷಾರ್ ಗಿರಿನಾಥ್

0

ಬೆಂಗಳೂರು: ಬೆಂಗಳೂರಿನ ಅಂಡರ್​ಪಾಸ್​ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್(Tushar Girinath) ಹೇಳಿದ್ದಾರೆ. ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅಂಡರ್‌ಪಾಸ್‌ಗಳ ಸುರಕ್ಷತೆಯ ಕುರಿತಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಯಾವ ಅಂಡರ್​ಪಾಸ್​ಗಳೂ ಸದ್ಯಕ್ಕೆ ಮುಚ್ಚುವಂತ ಸ್ಥಿತಿಯಲ್ಲಿ ಇಲ್ಲ. ಕೆ.ಆರ್.ಸರ್ಕಲ್ ಹತ್ತಿರ ಕೆಲಸ ಶುರು ಮಾಡಿದ್ದೇವೆ. ಇತರೆ ಕಡೆಗಳಲ್ಲಿಯೂ ಅಗತ್ಯ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸೈರನ್ ಅಳವಡಿಸುವ ಕ್ರಮದ ಕುರಿತು ಸರ್ಕಾರದಿಂದ ವರದಿ ಬರುವುದು ಬಾಕಿ ಇದೆ. ಸದ್ಯಕ್ಕೆ ಒಂದು ಸಿಸಿಟಿವಿ, ಲೈಟ್​ಗಳು ಹಾಗೂ ಮ್ಯಾನುವಲ್ ಬ್ಯಾರಿಕೇಡ್ ಅಳವಡಿಸಿದ್ದೇವೆ. ಇವು ಎತ್ತರದಲ್ಲಿದ್ದು ಅಪಾಯ ತಪ್ಪಿಸಲಿವೆ. ಜೊತೆಗೆ, ಬೂಮ್ ಬ್ಯಾರಿಯರ್‌ ಅನ್ನು ಅಳವಡಿಸಲಾಗಿದೆ” ಎಂದು ಮಾಹಿತಿ ನೀಡಿದರು. ಅಂಡರ್​ಪಾಸ್​ಗಳ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಬಾರದು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಂಡರ್​ಪಾಸ್ ಕುರಿತು ಹೆಚ್ಚಿನ ಗಮನ ಹರಿಸಬೇಕು ಹಾಗೂ ಸುರಕ್ಷತೆ ಕಡೆ ಅಧಿಕಾರಿಗಳು ಗಮನ ಹರಿಸಬೇಕು” ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed