ರಾಜಕಾಲುವೆ ಒತ್ತುವರಿ ಕುರಿತು ಸರ್ಕಾರ ಕಠಿಣ ನಿರ್ಧಾರ ಮಾಡಬೇಕು-ಹೆಚ್.ಡಿ.ದೇವೇಗೌಡ್ರು

ರಾಜಕಾಲುವೆ ಒತ್ತುವರಿ ಕುರಿತು ಸರ್ಕಾರ ಸ್ವಲ್ಪ ಕಠಿಣ ನಿರ್ಧಾರ ಮಾಡಬೇಕಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಆಗ್ರಹಿಸಿದ್ದಾರೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಲ್ಲಿ ಭಾರೀ ಮಳೆಯಾಗಿ ಭಾರೀ ಹಾನಿ ಸಂಭವಿಸಿದೆ. ರಾಜಾಕಾಲುವೆ ಒತ್ತುವರಿ ಇದಕ್ಕೆ ಕಾರಣವಾಗಿದೆ. ಒತ್ತುವರಿ ಬಗ್ಗೆ ತಜ್ಞ ರಾದ ಲಕ್ಷ್ಮಣ್ ರಾವ್ ಸಮಿತಿಯ ವರದಿಯಲ್ಲಿ ಪ್ರಸ್ತಾಪ ಆಗಿದೆ. ಅವರ ವರದಿ ಸರ್ಕಾರದ ಬಳಿ ಇದೆ. ಇಂತಹ ಅನಾಹುತ ತಪ್ಪಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆದರೆ ಸರ್ಕಾರ ವರದಿ ಜಾರಿ ಬದಲು ಸುಮ್ಮನೆ ಮೊಸಳೆ ಕಣ್ಣಿರು ಹಾಕುವ ಕೆಲಸ ಯಾರು ಮಾಡಬಾರದು ಎಂದು ಹೇಳಿದ್ದಾರೆ. ಒತ್ತುವರಿ ತೆರವುಗೊಳಿಸುವುದರ ಬಗ್ಗೆ ಸರ್ಕಾರ ಕಠಿಣ ನಿರ್ಧಾರ ಮಾಡಬೇಕಿದೆ. ಒತ್ತುವರಿ ವಿಚಾರದಲ್ಲಿ ಅನೇಕ ರಾಜಕಾರಣಿಗಳು ಇರಬಹುದು. ಕೆರೆಗಳ ಒತ್ತುವರಿ ಬಗ್ಗೆ ಸಹ ವರದಿಯಲ್ಲಿ ಪ್ರಸ್ತಾಪ ಆಗಿದೆ. ಕಂದಾಯ ಸಚಿವರು ಹೊಸ ಕಾಯ್ದೆ ತರುತ್ತೇನೆ ಅಂತ ಹೇಳ್ತಿದ್ದಾರೆ. ಹೀಗಾಗಿ ಬಿಜೆಪಿ. ಕಾಂಗ್ರೆಸ್ ಬಗ್ಗೆ ಆರ್ ಆರ್ ನಗರದ ಜನ ಯೋಚನೆ ಮಾಡಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಹೇಳಿದ್ರು.

Add Comment