ದೆಹಲಿಯಲ್ಲಿ ಇಂದು ಗುರುವಾರ ಕೇವಲ 12.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ!

ದೇಶದ ರಾಜಧಾನಿ ದೆಹಲಿ‌ಯಲ್ಲಿ ಇಂದು 12.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 26 ವರ್ಷಗಳಲ್ಲೇ ದೆಹಲಿಯಲ್ಲಿ ದಾಖಲಾದ ಅತ್ಯಂತ ಕನಿಷ್ಟ ಉಷ್ಣಾಂಶ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಏಕೆಂದರೆ 1994 ರ ಅಕ್ಟೋಬರ್ 31ರಂದು ದೆಹಲಿಯಲ್ಲಿ 12.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಇದಕ್ಕೂ ಮುನ್ನ 1937 ರಲ್ಲಿ ದೆಹಲಿಯಲ್ಲಿ ಕೇವಲ 9.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದೇ ಈವರೆಗಿನ ದೆಹಲಿಯಲ್ಲಿನ ಕನಿಷ್ಟ ಉಷ್ಣಾಂಶವಾಗಿದೆ.
ಕೆ ಟಿವಿ ನ್ಯೂಸ್ ನವದೆಹಲಿ

Add Comment