RTI ಕಾರ್ಯಕರ್ತ ಲಿಂಗರಾಜು ಕೊಲೆ ಕೇಸ್-12 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಕಳೆದ 8 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಆರ್.ಟಿ.ಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದ 12 ಅಪರಾಧಿಗಳಿಗೂ ಬೆಂಗಳೂರಿನ ಸಿ.ಸಿ.ಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಬೆಂಗಳೂರಿನ ಆಜಾದ್ ನಗರ ವಾರ್ಡಿನ ಮಾಜಿ ಕಾರ್ಪೊರೇಟರ್ ಗೌರಮ್ಮ,ಪತಿ ಗೋವಿಂದರಾಜು,
ರಂಗಸ್ವಾಮಿ,ಶಂಕರ್,ರಾಘವೇಂದ್ರ,ಚಂದ್ರ,ಭವಾನಿ,
ಉಮಾಶಂಕರ್,ಲೋಕನಾಥ್,ವೇಲು,ಜಹೀರ್,ಸುರೇಶ್ ಸೇರಿದಂತೆ 12 ಅಪರಾಧಿಗಳಿಗೂ ಸಿ.ಸಿ.ಎಚ್. 59ರ ಕೋರ್ಟಿನ ನ್ಯಾಯಾಧೀಶರಾದ ಲಕ್ಷ್ಮೀನಾರಾಯಣ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment