ಐಪಿಎಲ್-20: CSKಗೆ 6 ವಿಕೆಟ್ ಗಳಿಂದ ಸೋತ KKR ಪ್ಲೇ ಆಫ್ ಹಾದಿ ಕಠಿಣ

ಯುಎಇ ದೇಶದ ರಾಜಧಾ‌ನಿ ದುಬೈ ನಗರದ ಕ್ರೀಡಾಂಗಣದಲ್ಲಿ ನಡೆದ ಗುರುವಾರದ ಐಪಿಎಲ್-20 ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿತು.
ಟಾಸ್ ಗೆದ್ದ CSK ನಾಯಕ ಎಂ.ಎಸ್.ಧೋನಿ ಮೊದಲು ಬೌಲ್ ಮಾಡಲು ನಿರ್ಧರಿಸಿದರು.
ಆದರೆ KKR ತುಸು ನಿಧಾನ ಗತಿಯಲ್ಲಿ ಉತ್ತಮ ಆರಂಭವನ್ನು ಪಡೆಯಿತು. ಓಪನರ್ ಶುಭಮಾನ್ ಗಿಲ್ 22(17 ಎಸೆತ) ರನ್ ಗಳಿಸಿ ಔಟಾದರೂ ಸಹ ಮತ್ತೊಬ್ಬ ಓಪನರ್ ನಿತೀಶ್ ರಾಣಾ ಅವರು ನಾಯಕ ಇಯಾನ್ ಮಾರ್ಗನ್ (15 ರನ್,12 ಎಸೆತ) ಮತ್ತು ಮಾಜಿ ನಾಯಕ ದಿನೇಶ್ ಕಾರ್ತಿಕ್ (25 ರನ್,10 ಎಸೆತ) ಜೊತೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 61 ಎಸೆತಗಳಲ್ಲಿ 10 ಬೌಂಡರಿ,4 ಸಿಕ್ಸರ್ ಬಾರಿಸಿ 87 ರನ್ ಬಾರಿಸಿ ಔಟಾದರು.
CSK ಪರ ನಿಗ್ಡಿ 4 ಓವರ್ ಬೌಲ್ ಮಾಡಿ 34 ರನ್ ನೀಡಿ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ಓವರ್ ಗಳಲ್ಲಿ 20 ರನ್ ನೀಡಿ ಒಂದು ವಿಕೆಟ್ ಪಡೆದರು.
ಬಳಿಕ CSK ಪರ ಸಹ ಓಪನರ್ ಋತುರಾಜ್ ಗಾಯಕ್ವಾಡ್ 72 ರನ್(53 ಎಸೆತ),ಅಂಬಟಿ ರಾಯುಡು 38 ರನ್,20 ಎಸೆತ) ಹಾಗೂ ಕಡೆಯಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಕೇವಲ 11 ಎಸೆತಗಳಲ್ಲಿ 2 ಬೌಂಡರಿ,3 ಸಿಕ್ಸರ್ ಬಾರಿಸಿ ಅಜೇಯ 31 ರನ್ ಹೊಡೆದು CSK ಜಯ ಗಳಿಸಲು ಕಾರಣರಾದರು.
ಆದರೆ ಕಡೆಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಋತುರಾಜ್ ಗಾಯಕ್ವಾಡ್ ಅವರ ಪಾಲಾಯಿತು.
ಒಟ್ಟಾರೆ 13 ಪಂದ್ಯಗಳನ್ನಾಡಿರುವ CSK 5 ಜಯ,8 ಸೋಲು ಕಂಡು ಕಡೆಯ ಸ್ಥಾನದಲ್ಲಿದೆ.
KKR ಸಹ 13 ಪಂದ್ಯಗಳಲ್ಲಿ ಆಡಿದ್ದರೂ 6 ಜಯ,7 ಸೋಲು ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಕೆ ಟಿವಿ ನ್ಯೂಸ್ ದುಬೈ

Add Comment