ಬೆಳಗಾವಿಯಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ: ತಪ್ಪಿದ ದುರಂತ

0

ಬೆಳಗಾವಿ: ಸಾಂಬ್ರಾ ಏರ್‌ ಪೋರ್ಟ್‌ನಿಂ ದ ಹೊರಟಿದ್ದ ರೆಡ್‌ ಬರ್ಡ್ ಸಂಸ್ಥೆಗೆ ಸೇರಿದ VT-RBF ತರಬೇತಿ ವಿಮಾನ ತಾಂತ್ರಿಕ ದೋಷದಿಂದ ಹೊನ್ನಿಹಾಳ ಹೊರವಲಯದ ಮೋದಗಾ, ಬಾಗೇವಾಡಿ ರಸ್ತೆ ಬದಿಯ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ.

ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಏರ್ ಫೋರ್ಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ತರಬೇತಿ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ದೊರೆತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

About Author

Leave a Reply

Your email address will not be published. Required fields are marked *

You may have missed