‘ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ’ ಅಂತಿಮ ಸ್ಪರ್ಧೆಯಲ್ಲಿ ಭಾರತ ಮೂಲದ ಇಬ್ಬರು ಶುಶ್ರೂಷಕಿಯರು

0

ಲಂಡನ್: ಪ್ರತಿಷ್ಠಿತ ‘ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ’ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾರತ ಮೂಲದ ಇಬ್ಬರು ಶುಶ್ರೂಷಕಿಯರು ಆಯ್ಕೆಯಾಗಿದ್ದಾರೆ. ‘ಗ್ಲೋಬಲ್‌ ನರ್ಸಿಂಗ್ ಪ್ರಶಸ್ತಿ’ಯ ಮೊತ್ತ 2.5 ಲಕ್ಷ ಡಾಲರ್‌ (ಸುಮಾರು ₹ 2.05 ಕೋಟಿ) ಆಗಿದೆ.

 

ದುಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಖಾಸಗಿ ಆರೋಗ್ಯ ಸೇವಾ ಸಂಸ್ಥೆ ಅಸ್ತೇರ್ ಡಿ.ಎಂ ಹೆಲ್ತ್‌ಕೇರ್, ವಿಶ್ವಾದಾದ್ಯಂತ ಸಾಧಕ ಶುಶ್ರೂಷಕಿಯರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡುತ್ತಿದೆ.

ಅಂಡಮಾನ್ ನಿಕೋಬಾರ್‌ನಲ್ಲಿ ಬುಡಕಟ್ಟು ಜನರ ಸೇವೆಯಲ್ಲಿ ನಿರತ ಶಾಂತಿ ತೆರೇಸಾ ಲಾಕ್ರಾ ಮತ್ತು ಕೇರಳ ಮೂಲದ ಐರ್ಲೆಂಡ್‌ನ ನಿವಾಸಿ ಜಿನ್ಸಿ ಜೆರಿ ಸೇರಿ ಸದ್ಯ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ 10 ಮಂದಿ ಶುಶ್ರೂಷಕಿಯರು ಇದ್ದಾರೆ.

ಪ್ರಶಸ್ತಿ ಪುರಸ್ಕೃತರ ಪ್ರಕಟಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಅಂತರರಾಷ್ಟ್ರೀಯ ನರ್ಸ್‌ಗಳ ದಿನವಾದ ಮೇ 12ರಂದು ಲಂಡನ್‌ನಲ್ಲಿ ನಡೆಯಲಿದೆ ಎಂದು ಹೇಳಿಕೆ ತಿಳಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed