ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ ನಟನೆ

0

ಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಇತಿಹಾಸ ಕ್ರಿಯೇಟ್ ಮಾಡಿದೆ. ಸದ್ಯ ಪುಷ್ಪ 2 ಸಿನಿಮಾ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು ಈ ಮಧ್ಯೆ ಚಿತ್ರತಂಡಕ್ಕೆ ಹೊಸ ಹೊಸ ಪ್ರತಿಭೆಗಳು ಸೇರ್ಪಡೆಯಾಗುತ್ತಿದ್ದಾರೆ.

ಇದೀಗ ಚಿತ್ರತಂಡಕ್ಕೆ ಮೆಗಾಸ್ಟಾರ್ ಚಿರಂಜೀವಿ ಮನೆ ಮಗಳು ನಿಹಾರಿಕಾ ಸೇರಿಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅಣ್ಣನ ಮಗಳು ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ಉದ್ಯಮಿ ಚೈತನ್ಯ ಜೊತೆ ವೈವಾಹಿಕ ಜೀವನಕ್ಕೆ ಬ್ರೇಕ್ ಬಿದ್ದ ಬಳಿಕ ನಿಹಾರಿಕಾ ಸಿನಿಮಾಗಳತ್ತ ಮುಖ ಮಾಡ್ತಿದ್ದಾರೆ. ಈ ಮಧ್ಯೆ ಅಲ್ಲು ಅರ್ಜುನ್ ನಟನೆಯ ನಿರೀಕ್ಷಿತ ಪುಷ್ಪ 2 ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಟಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ ಅವರು ತೊಡಗಿಕೊಂಡಿದ್ದಾರೆ. ‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಹೊಸ ಕಚೇರಿಯನ್ನು ಅವರು ಇತ್ತೀಚೆಗೆ ತೆರೆದಿದ್ದಾರೆ. ಈ ಮಧ್ಯೆ ನಿಹಾರಿಕಾ ಮತ್ತೆ ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ನೀಡಿದೆ.

About Author

Leave a Reply

Your email address will not be published. Required fields are marked *

You may have missed