ಬಿಯರ್ ಸೇವನೆಯಿಂದ ಕಿಡ್ನಿ ಕಲ್ಲು ನಿವಾರಣೆಯಾಗುವುದೇ..? ಇಲ್ಲಿದೆ ಉತ್ತರ

0

ಕಿಡ್ನಿಯಲ್ಲಿ ಕಾಣಿಸಿಕೊಳ್ಳುವ ಕಲ್ಲಿನ ಸಮಸ್ಯೆಯನ್ನು ನೆಫ್ರೋಲಿಥಿಯಾಸಿಸ್ ಎಂದೂ ಕರೆಯುತ್ತಾರೆ. ಮೂತ್ರಪಿಂಡದ ಕಲ್ಲುಗಳ (Kidney Stone) ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮೂತ್ರನಾಳವನ್ನು ನಿರ್ಬಂಧಿಸುವಂತಹ ತೊಡಕುಗಳು ಉಂಟಾಗುತ್ತವೆ.

ಮೂತ್ರಪಿಂಡದ ಕಲ್ಲುಗಳಿಂದ ಉಂಟಾಗುವ ನೋವು ವಿಪರೀತ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಮೂತ್ರಪಿಂಡ ಕಲ್ಲಿನ ಸಮಸ್ಯೆಯಿದ್ದಾಗ ನೋವು (Pain) ಅತ್ಯಂತ ಸಾಮಾನ್ಯ ರೋಗ ಲಕ್ಷಣಗಳಲ್ಲಿ ಒಂದಾಗಿದೆ.

ಆದರೆ ಇದಲ್ಲದೆಯೂ ಬೆನ್ನು, ಹೊಟ್ಟೆ ಅಥವಾ ಬದಿಯಲ್ಲಿ ನೋವು, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯ ಅನುಭವ, ಆಗಾಗ ತುರ್ತು ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ, ವಾಸನೆಯುಕ್ತ ಮೂತ್ರ, ವಾಕರಿಕೆ ಮತ್ತು ವಾಂತಿ ಚಳಿ ಮತ್ತು ಜ್ವರ ಕಲ್ಲು ಗಾತ್ರದಲ್ಲಿ ಚಿಕ್ಕದಾಗಿದ್ದರೆ ಬಹಳಷ್ಟು ನೀರು ಕುಡಿಯುವುದರಿಂದ ಅದು ನಮ್ಮ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ, ಆದರೆ ಕಲ್ಲು ದೊಡ್ಡದಾಗಿದ್ದರೆ ಆಪರೇಷನ್ ಹೊರತುಪಡಿಸಿ ಬೇರೆ ಮಾರ್ಗವಿಲ್ಲ.

ಮನೆಮದ್ದುಗಳನ್ನು ಬಳಸಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸುತ್ತಿರುವುದನ್ನು ನಾವೆಲ್ಲರೂ ನೋಡಿದ್ದೇವೆ ಮತ್ತು ಕೇಳಿದ್ದೇವೆ, ಆದರೆ ಅಲ್ಕೋಹಾಲ್‌ಯುಕ್ತ ಪಾನೀಯವಾದ ಬಿಯರ್ (Beer) ಕುಡಿಯುವುದರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಎಷ್ಟರಮಟ್ಟಿಗೆ ನಿಜ. ಕಲ್ಲು ಇದ್ದರೆ ಬಿಯರ್ ಸೇವನೆಯಿಂದ ಅದು ನಮ್ಮ ದೇಹ (Body)ದಿಂದ ಹೊರಬರುತ್ತದೆ ಅನ್ನೋದು ನಿಜಾನ ? ಅದರ ಹಿಂದಿನ ಕಾರಣ ಏನು ಎಂಬುದನ್ನು ತಿಳ್ಕೊಳ್ಳೋಣ.

ಮೂತ್ರಪಿಂಡದಕಲ್ಲಿನಸಮಸ್ಯೆಇರುವವರುಬಿಯರ್ಸೇವಿಸೋದುಒಳ್ಳೆಯದಾ ?
ಸಂಶೋಧನೆಯ (Study) ಪ್ರಕಾರ, ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇರುವವರು ಬಿಯರ್ ಸೇವಿಸಿದರೆ,ಸಮಸ್ಯೆ ನಿವಾರಣೆಯಾಗಲು 51% ಅವಕಾಶವಿದೆ, ಏಕೆಂದರೆ ಹೆಚ್ಚು ಬಿಯರ್ ಕುಡಿಯುವುದರಿಂದ ನಾವು ಹೆಚ್ಚಾಗಿ ಮೂತ್ರ ವಿಸರ್ಜಿಸುತ್ತೇವೆ, ಇದು ಮೂತ್ರಪಿಂಡದ ಕಲ್ಲುಗಳ ಜೊತೆಗೆ ದೇಹದ ಇತರ ತ್ಯಾಜ್ಯಗಳು ಹೊರಬರಲು ಕಾರಣವಾಗುತ್ತದೆ.

ಕಲ್ಮಶಗಳು ದೇಹದಿಂದ ಹೊರಬರಲು ಬಿಯರ್ ಬಳಕೆ ಸ್ವಲ್ಪಮಟ್ಟಿಗೆ ಪ್ರಯೋಜನಕಾರಿಯಾಗಿದೆ. ಆದರೆ ಹೆಚ್ಚು ಬಿಯರ್ ದೇಹಕ್ಕೆ ಒಳ್ಳೆಯದಲ್ಲ, ಮೂತ್ರಪಿಂಡದಲ್ಲಿ ಸಣ್ಣ ಗಾತ್ರದ ಕಲ್ಲುಗಳಿದ್ದರೆ, ಅದು ಬಿಯರ್ ಕುಡಿಯುವುದರಿಂದ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ, ಆದರೆ ಕಲ್ಲಿನ ಗಾತ್ರ ದೊಡ್ಡದಾಗಿದ್ದರೆ, ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ತೊಂದರೆಯೂ ಕಾಣಿಸಿಕೊಳ್ಳಬಹುದು.

ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ನಿವಾರಿಸಲು ಹೆಚ್ಚು ಬಿಯರ್ ಸೇವಿಸಿದರೆ ಅದು ದೇಹಕ್ಕೆ ಹಾನಿಕಾರಕವಾಗಿದೆ. ಏಕೆಂದರೆ ಹೆಚ್ಚು ಬಿಯರ್ ಕುಡಿಯುವ ಅಭ್ಯಾಸ ನಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಕಿಡ್ನಿಯಲ್ಲಿ ಕಲ್ಲುಗಳ ಪ್ರಮಾಣವೂ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಕುಡಿಯಬೇಡಿ ಎಂದು ಹೆಚ್ಚಿನ ಸಂಶೋಧನೆಯು ತೋರಿಸಿದೆ.

ಮೂತ್ರಪಿಂಡದಕಲ್ಲುಗಳಿಗೆಮನೆಮದ್ದು
ನಿಂಬೆ ನೀರು, ಕ್ಯಾರೆಟ್ ಜ್ಯೂಸ್, ಅನಾನಸ್ ಜ್ಯೂಸ್, ಕಬ್ಬಿನ ರಸ ಮತ್ತು ಈರುಳ್ಳಿಯ ಸೇವನೆಯು ಮೂತ್ರಪಿಂಡದ ಕಲ್ಲುಗಳ ವಿರುದ್ಧ ರಕ್ಷಣೆ ನೀಡುತ್ತದೆ. ಜೊತೆಗೇ ನೋವನ್ನು ನಿವಾರಿಸುತ್ತದೆ. ದೇಹದಿಂದ ಕಲ್ಲುಗಳನ್ನು ತೆಗೆದುಹಾಕುವಲ್ಲಿ ಸಹ ಉಪಯುಕ್ತವಾಗಿದೆ. ಅಡುಗೆ ಮನೆಯಲ್ಲಿ ಕಂಡುಬರುವ ಸಾಮಾನ್ಯ ವಸ್ತುಗಳಲ್ಲಿ ನಿಂಬೆ ಹಣ್ಣು ಒಂದಾಗಿದೆ. ಪ್ರತಿ ಲೋಟ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸುವುದು ಮೂತ್ರಪಿಂಡದ ಕಲ್ಲುಗಳ ವಿರುದ್ಧ ಸಾಕಷ್ಟು ಸಹಾಯ ಮಾಡುತ್ತದೆ.

ಮೂತ್ರಪಿಂಡದ ಕಲ್ಲುಗಳ ಇತಿಹಾಸವನ್ನು ಹೊಂದಿದ್ದರೆ ಅಥವಾ ಪ್ರಸ್ತುತ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ಅನುಸರಿಸಬಹುದಾದ ಕೆಲವು ನೈಸರ್ಗಿಕ ಪರಿಹಾರಗಳಾಗಿ ಮೇಲೆ ಉಲ್ಲೇಖಿಸಿದ ಅಂಶಗಳನ್ನು ಪ್ರಯತ್ನಿಸಬಹುದು. ಆದಾಗ್ಯೂ ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದರೆ, ಪರಿಸ್ಥಿತಿಗಳ ಮೇಲೆ ಕಣ್ಣಿಡಲು ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸಿ. ಈ ನೈಸರ್ಗಿಕ ಪರಿಹಾರಗಳ ಹೊರತಾಗಿ, ಈ ಸ್ಥಿತಿಯನ್ನು ಗುಣಪಡಿಸಲು ಸರಿಯಾದ ಔಷಧೋಪಚಾರದ ಅಗತ್ಯವೂ ಇರಬಹುದು.

About Author

Leave a Reply

Your email address will not be published. Required fields are marked *

You may have missed