BIG Breaking – ಆಷಾಢದಲ್ಲೇ ಸರ್ಕಾರ ಪತನ – ಆನಂದ್ ಸಿಂಗ್ ರಾಜೀನಾಮೆ

ಮೈತ್ರಿ ಸರಕಾರಕ್ಕೆ ಬಿಗ್ ಶಾಕ್. ಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಬಳ್ಳಾರಿಯ ವಿಜಯನಗರ ಶಾಸಕ ಅನಂದ್ ಸಿಂಘ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜಿಂದಾಲ್ ವಿಚಾರದಲ್ಲಿ ಮುನಿಸಿಕೊಂಡಿದ್ದ ಆನಂದ್ ಸಿಂಗ್, ರಾಜೀನಾಮೆಗೆ ಮುಂದಾಗಿದ್ದಾರೆ. ಕಂಪ್ಲಿ ಶಾಸಕ ಗಣೇಶ್ ಅಮಾನತು ಹಿಂಪಡೆದಿದ್ದ ಕಾಂಗ್ರೆಸ್ ನಿಲುವಿನಿಂದಲೂ ಆನಂದ್ ಸಿಂಗ್ ಸಿಟ್ಟಾಗಿದ್ದರು ಎನ್ನಲಾಗ್ತಿದೆ.
ರಾಜ್ಯದಲ್ಲಿ ಶುರುವಾಗುತ್ತಾ ರಾಜೀನಾಮೆ ಪರ್ವ?-
ಆನಂದ್ ಸಿಂಗ್ ಶಾಕ್ ಬೆನ್ನಲ್ಲೇ ಮೈತ್ರಿ ಸರಕಾರ ಶೇಕ್ ಆಗತೊಡಗಿದೆ. ಆನಂದ್ ಸಿಂಗ್ ಬೆನ್ನಲ್ಲೇ 12 ಶಾಸಕರ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. 12 ಕೈ ಅತೃಪ್ತ ಶಾಸಕರ ಮೊಬೈಲ್ ಸ್ವಿಚ್ಡ್​ ಆಫ್ ಆಗಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಇವರೆಲ್ಲಾ ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಹಾವೇರಿಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಕಂಪ್ಲಿ ಶಾಸಕ ಗಣೇಶ್, ನಾಗೇಂದ್ರ, ಪ್ರತಾಪ್​ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಶಿವರಾಮ್ ಹೆಬ್ಬಾರ್​ ಇಂದೇ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

Add Comment