ಉಪಾಧ್ಯಕ್ಷೆ ಪಿ.ನಿರ್ಮಲಾ ಅವರನ್ನು ಅವಿಶ್ವಾಸ ನಿರ್ಣಯ ಮಂಡಿಸಿ ಬಹುಮತದಿಂದ ವಜಾ ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ 28 ಸ್ಥಾನಗಳ ಪೈಕಿ ಕಾಂಗ್ರೆಸ್ 21, ಜೆಡಿಎಸ್ 6, ಸಿಪಿಎಂ ಹಾಗೂ ಬಿಜೆಪಿ ತಲಾ ಒಂದು ಸ್ಥಾನಗಳಲ್ಲಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ 2016 ಮೇ 7 ರಂದು ನಡೆದ ಚುನಾವಣೆಯಲ್ಲಿ ಪಿ.ನಿರ್ಮಲಾ ಅವರು ಚಿಕ್ಕಬಳ್ಳಾಪುರ ಜಿ.ಪಂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಆದರೆ ಎರಡುವರೆ ವರ್ಷಗಳ ಆಧಿಕಾರಾವಧಿ ಮುಗಿದರೂ ರಾಜೀನಾಮೆ ನೀಡದೆ ಅಧಿಕಾರದಲ್ಲಿ ಉಳಿದಿದ್ದ ಪಿ.ನಿರ್ಮಲಾ ವಿರುದ್ಧ ಸ್ವತಃ ಕಾಂಗ್ರೆಸ್ ಜಿ.ಪಂ ಸದಸ್ಯರೇ ಒಟ್ಟಾಗಿ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ಆದ್ದರಿಂದ ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದಾಗ ಕಾಂಗ್ರೆಸ್, ಜೆಡಿಎಸ್,ಸಿಪಿಎಂ,ಬಿಜೆಪಿ ಪದಕ ಎಲ್ಲಾ ವಾರ್ಡ್ ಸದಸ್ಯರು ಪಕ್ಷಾತೀತವಾಗಿ ಮತ ಚಲಾಯಿಸಿ ಪಿ.ನಿರ್ಮಲಾ ಅವರನ್ನು 27-1 ಮತಗಳಿಂದ ಸೋಲಿಸಿದರು. ಆದಾಗ್ಯೂ ಈ ಚುನಾವಣೆಯಲ್ಲಿ ಗಾಯತ್ರಿ ನಂಜುಂಡಪ್ಪ ಮತ್ತು ಪವಿತ್ರಾ ಅವರು ಮತದಾನ ಮಾಡದೆ ಗೈರುಹಾಜರಾಗಿದ್ದರು.
ಈ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸಿ ಚುನಾವಣೆ ನಡೆದ ವೇಳೆ ಜಿಲ್ಲಾಧಿಕಾರಿ ಅಮರೇಶ್ ಹಾಗೂ ಸಿಇಒ ಶಿವಶಂಕರ್ ಸಹ ಉಪಸ್ಥಿತರಿದ್ದರು.
ಆದಾಗ್ಯೂ ಇದೀಗ ಕಾಂಗ್ರೆಸ್ ಪಕ್ಷದ ತೊಂಡೇಬಾವಿ ಸರಸ್ವತಮ್ಮ ಅವರು ಮುಂದಿನ ಚಿಕ್ಕಬಳ್ಳಾಪುರ
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಹೇಳಿದ್ದಾರೆ.
ಆದಾಗ್ಯೂ ಬೆಂಗಳೂರು ಪ್ರಾದೇಶಿಕ ಆಯುಕ್ತೆ ನವೀನ್ ರಾಜ್ ಸಿಂಗ್ ಅವರು ಜಿ.ಪಂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ಪ್ರಕಟಿಸಲಿದ್ದಾರೆ.