ಬೇಗ ನೋಡಿ – ಅಪಾಯಕಾರಿ ನದಿಯಲ್ಲಿ ಮೋದಿ ಸಾಹಸ – 180 ದೇಶಗಳಲ್ಲಿ ಪ್ರಸಾರ

ಭಾರತೀಯರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದಟ್ಟ ಕಾನನದಲ್ಲಿ ಸಾಹಸ ಮಾಡಿರೋ ಮೋದಿ ಕುರಿತ ಸಾಕ್ಷ್ಯಚಿತ್ರವೊಂದು ರೆಡಿಯಾಗಿದೆ. ಜಿಮ್ ಕಾರ್ಬೆಟ್​ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಡಾಕ್ಯುಮೆಂಟರಿ ಚಿತ್ರೀಕರಣ ನಡೆದಿದೆ. ಪ್ರಧಾನಿ ಮೋದಿ, ದಟ್ಟಡವಿಯಲ್ಲಿ ನಡೆದಾಡುತ್ತಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಡಿಸ್ಕವರಿ ಚಾನೆಲ್​ನ ಮ್ಯಾನ್ ವರ್ಸಸ್ ವೈಲ್ಡ್​ ಡಾಕ್ಯುಮೆಂಟರಿಯಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಜಗತ್ತಿನ ಅತ್ಯಂತ ಸಾಹಸಿ ನಿರೂಪಕ್ ಬೇರ್ ಗ್ರಿಲ್ಸ್​ ಈ ಡಾಕ್ಯುಮೆಂಟರಿ ನಡೆಸಿಕೊಟ್ಟಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮತ್ತೊಂದು ವ್ಯಕ್ತಿತ್ವ ಇದರಲ್ಲಿ ಅನಾವರಣಗೊಳ್ಳಲಿದೆ. 180 ದೇಶಗಳಲ್ಲಿ ಇದು ಪ್ರಸಾರವಾಗಲಿದೆ ಎಂದು ಡಿಸ್ಕವರಿ ಚಾನೆಲ್ ಹೇಳಿಕೊಂಡಿದೆ.

ಈ ಸಾಕ್ಷ್ಯಚಿತ್ರದಲ್ಲಿ ಮೋದಿ ತಮ್ಮ ಪ್ರಾಣಿ ಪ್ರೀತಿ, ಪರಿಸರ ಸಂರಕ್ಷಣೆಯ ಕಾಳಜಿಯನ್ನು ಹೇಳಿಕೊಳ್ಳಲಿದ್ದಾರೆ. ಹಿಮಾಲಯದ ತಪ್ಪಲಿನಲ್ಲಿ ಬದುಕು ಸವೆಸಿದ ರೋಚಕ ವಿಚಾರಗಳನ್ನೂ ಮೋದಿ ಹೇಳಿಕೊಂಡಿದ್ದಾರೆ. ಡಾಕ್ಯುಮೆಂಟರಿಯ ಟ್ರೇಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಮೋದಿ ಕೋವಿ ಹಿಡಿದು ಓಡಾಡಿದ್ದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲದೆ, ಅಪಾಯಕಾರಿಯಾಗಿ ಹರಿಯುತ್ತಿದ್ದ ನದಿಯಲ್ಲಿ ರ್ಯಾಫ್ಟಿಂಗ್ ಕೂಡಾ ಮಾಡಿದ್ದಾರೆ.

Add Comment