ಬಿಹಾರದ 3ನೇ-ಅಂತಿಮ ಹಂತದ 78 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ

ಬಿಹಾರ ವಿಧಾನಸಭಾ ಚುನಾವಣೆಗಾಗಿ 3 ನೇ ಹಾಗೂ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ.  ಇಂದು ಬಿಹಾರ ವಿಧಾಸಭೆಯ 3ನೇ ಹಂತದ ಚುನಾವಣೆಯಲ್ಲಿ 78 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ 3 ಹಂತಗಳಲ್ಲಿ ಚುನಾವಣೆ ಘೋಷಿಸಲಾಗಿತ್ತು. ‌ ಈ ಪೈಕಿ ಇಂದಿನ 3ನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿರುವ 78 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,204 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  15 ಜಿಲ್ಲೆಗಳ 33,782 ಮತಗಟ್ಟೆಗಳಲ್ಲಿ 2.35 ಕೋಟಿ ಮತದಾರರು ಇಂದು ಬಿಹಾರದ 3ನೇ ಹಂತದ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ.

ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಿಹಾರ ರಾಜ್ಯದ 78  ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನಕ್ಕಾಗಿ ಇವಿಎಂ ಮತ್ತು ವಿವಿ ಪ್ಯಾಟ್ ಗಳನ್ನು ಅಳವಡಿಸಲಾಗಿದೆ.

ಕೊರೊನಾ ವೈರಸ್ ಸೋಂಕು ಹರಡದಂತೆ ಮತದಾರರಿಗೆ ಮಾಸ್ಕ್  ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮತಗಟ್ಟೆಗೆ ಮತದಾನಕ್ಕೆ ಬರುವುದನ್ನು ಕೇಂದ್ರ ಚುನಾವಣಾ ಆಯೋಗ ಕಡ್ಡಾಯಗೊಳಿಸಿದೆ.  ಆದರೆ ಮತದಾರರು ಮತಗಟ್ಟೆಗೆ ಒಳಬರುವ ಮುನ್ನ ಕಡ್ಡಾಯವಾಗಿ ನೀಡುವ ಸ್ಯಾನಿಟೈಸರ್ ಅನ್ನು ಕೈಗಳಿಗೆ ಹಚ್ಚಿಕೊಂಡು ತೊಳೆದು ಬಳಿಕ ಮತದಾನ ಮಾಡಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ.

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಿಹಾರ ರಾಜ್ಯದ 78 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಂದ ಮತದಾನ ನಡೆಯುತ್ತಿದೆ.

ಒಟ್ಟು 78 ಕ್ಷೇತ್ರಗಳಲ್ಲಿ ಜೆಡಿಯು ಪಕ್ಷದ 37 ಅಭ್ಯರ್ಥಿಗಳು, ಬಿಜೆಪಿ ಪಕ್ಷದ 35 ಅಭ್ಯರ್ಥಿಗಳು,‌ ಲೋಕಜನಶಕ್ತಿ ಪಕ್ಷದ 42 ಅಭ್ಯರ್ಥಿಗಳು, ವಿಕಾಸ್ ಶೀಲ್ ಇನ್ಸಾನ್ ಪಕ್ಷದ 5 ಅಭ್ಯರ್ಥಿಗಳು ಹಾಗೂ ಹಿಂದುಸ್ತಾನ್ ಅವಾಂ ಮೋರ್ಚಾ ಪಕ್ಷದ ಓರ್ವ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ.

ಈ ಪೈಕಿ ಗಂಜ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಶರದ್ ಯಾದವ್ ಪುತ್ರಿ ಸುಭಾಷಿಣಿ ಯಾದವ್ ಸ್ಪರ್ಧಿಸಿದ್ದಾರೆ.

ಇದೇ ವೇಳೆ ನಳಂದಾ ಜಿಲ್ಲೆಯ ಹಿಸುವಾ ಕ್ಷೇತ್ರದ 2 ಮತಗಟ್ಟೆಗಳಲ್ಲಿ ಮುಂದೂಡಿಕೆಯಾಗಿದ್ದ ಮತದಾನ ಇಂದು ನಡೆಯುತ್ತಿದೆ.  ಮತದಾನದ ಇವಿಎಂ ಮೆಶೀನ್ ಗಳನ್ನು ಮತಗಟ್ಟೆಗಳಿಗೆ ತರುವಾಗ ನಡೆದಿದ್ದ ಅಪಘಾತದಲ್ಲಿ ಇವಿಎಂ ಮೆಶಿನ್ ಹಾಳಾಗಿತ್ತು.‌ ಆದ ಕಾರಣ ಇಂದು ಹಿಸುವಾ ಕ್ಷೇತ್ರದ  2 ಮತಗಟ್ಟೆಗಳಲ್ಲಿ ಮರುಮತದಾನ ನಡೆಯುತ್ತಿದೆ.

ಕೆ ಟಿವಿ ನ್ಯೂಸ್ ಪಟ್ನಾ

Add Comment