ಮೇ ತಿಂಗಳಲ್ಲೇ ಶೇ.40ಕ್ಕಿಂತ ಹೆಚ್ಚು ಕೋವಿಡ್ ಸೋಂಕು ಏರಿಕೆ

0

ಬೀಜಿಂಗ್: ಕೊರೋನಾ ವೈರಸ್ ನ ತವರಾದ ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕು ಉಲ್ಬಣಗೊಂಡಿದೆ. ಕಳೆದ ಮೇ ತಿಂಗಳಲ್ಲೇ ಶೇ.40ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಏಪ್ರಿಲ್ ನಿಂದ ಚೀನಾ ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗ ನಿರ್ಣಯ ಮಾಡಿದ ಜನರ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚು ಏರಿಕೆ ಕಂಡಿದೆ.

ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ದತ್ತಾಂಶವನ್ನು ಬಿಡುಗಡೆ ಮಾಡಿದ್ದು, ಇದು ಮೇ ತಿಂಗಳ ಅಂತ್ಯದಲ್ಲಿ ಪರೀಕ್ಷಿಸಲ್ಪಟ್ಟವರ (ಕೋವಿಡ್ ಪರೀಕ್ಷೆ) ಪೈಕಿ ಶೇಕಡಾ 40 ಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಚೀನಾವು ಮೇ ತಿಂಗಳಲ್ಲಿ ಮತ್ತೊಂದು ಕೋವಿಡ್ -19 ಅಲೆಗೆ ತುತ್ತಾಗಿದ್ದು, ಇದು 2022 ರ ಕೊನೆಯಲ್ಲಿ ಸಾಂಕ್ರಾಮಿಕ ಹಿಟ್ ಸಮಯದಲ್ಲಿ ಕಂಡುಬಂದ ಗರಿಷ್ಠ ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚು ಪಾಸಿಟಿವಿಟಿ ಪ್ರಮಾಣವನ್ನು ಹೊಂದಿತ್ತು ಎಂದು ಹೇಳಲಾಗಿದೆ. ಕೋವಿಡ್ -19 ಸೋಂಕಿಗೆ ಒಳಗಾದವರಲ್ಲಿ ಚೀನಾ ಮೇ ತಿಂಗಳಲ್ಲಿ 164 ಸಾವುಗಳನ್ನು ವರದಿ ಮಾಡಿದೆ. ಇದಲ್ಲದೆ, ದಿ ಸ್ಟ್ರೈಟ್ಸ್ ಟೈಮ್ಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 2,777 ಜನರು ತೀವ್ರ ಸೋಂಕಿಗೆ ಒಳಗಾಗಿದ್ದಾರೆ ಮತ್ತು ತಿಂಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ತಿಳಿದುಬಂದಿದೆ.

About Author

Leave a Reply

Your email address will not be published. Required fields are marked *

You may have missed