ನವಂಬರ್ 11ರಿಂದ ಸಿಲಿಕಾನ್ ಸಿಟಿಯಲ್ಲಿ ಕೃಷಿ ಮೇಳ

ಕೊರೊನಾ ಹಿನ್ನೆಲೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಈ ಬಾರಿ ಸರಳ ಕೃಷಿ ಮೇಳ ಆಯೋಜನೆ ಮಾಡಿದೆ. ನವೆಂಬರ್ 11 ರಿಂದ ಕೃಷಿ ಮೇಳ ಆರಂಭವಾಗಲಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಗಾಂಧಿ ವಿಜ್ಞಾನ ಕೃಷಿ ಕೇಂದ್ರ (ಜಿಕೆವಿಕೆ) ಅವರಣದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ಪ್ರತಿವರ್ಷದಂತೆ ಈ ಬಾರಿ ಸಹ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ರಾಜ್ಯಮಟ್ಟದಲ್ಲಿ 6, ಜಿಲ್ಲಾ ಮಟ್ಟದ 17 ಮತ್ತು ತಾಲೂಕು ಮಟ್ಟದ 90 ಕೃಷಿ ಸಾಧಕರಿಗೆ ಪ್ರಶಸ್ತಿ ಕೊಡಲಾಗುವುದು.

 

 

Add Comment