ಸೌಂಡ್ ಮಾಡಲು ಸಜ್ಜಾದ ‘ಐರಾವನ್’ ಸಿನಿಮಾ

ರಾಮ್ಸ್ ರಂಗಾ ನಿರ್ದೇಶಿಸುತ್ತಿರುವ ‘ಐರಾವನ್’ ಎಂಬ ಹೊಸ ಚಿತ್ರದ ಮೂಹೂರ್ತವನ್ನು ಇತ್ತೀಚೆಗಷ್ಟೇ ಗವಿಪುರಂನ ಕಾಲಭೈರವೇಶ್ವರ ದೇವಾಲಯದಲ್ಲಿ ಮಾಡಲಾಗಿದೆ. ಈ ಚಿತ್ರದಲ್ಲಿ ಕಾರ್ತಿಕ್ ಜಯರಾಂ ನಾಯಕನಾಗಿ ನಟಿಸುತ್ತಿದ್ದು ನಿರಂತರ ಗಣೇಶ್ ತಮ್ಮ ನಿರಂತರ ಪ್ರೊಡಕ್ಷನ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಪ್ರದೀಪ್ ವರ್ಮಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗಿದೆ.
ಕೆ.ಟಿವಿ, ಕನ್ನಡ

Add Comment