ಕೋಮುಗಲಭೆಯಲ್ಲಿ ಮೃತಪಟ್ಟವರ ಪ್ರಕರಣ ಮರು ತನಿಖೆಗೆ ಮುಂದಾರ ಸರ್ಕಾರ

0

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ಬಿಜೆಪಿಗೆ ಟಕ್ಕರ್ ಮೇಲೆ ಟಕ್ಕರ್ ಕೊಡ್ತಿದೆ. ಬಿಜೆಪಿ ಸರ್ಕಾರದಲ್ಲಿ ಕೋಮುಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡುವಲ್ಲಿ ತಾರತಮ್ಯ ಮಾಡಿದೆ. ಅಂತವರಿಗೆ ನ್ಯಾಯ ಕೊಡಿಸೋದಕ್ಕೆ ನಮ್ಮ ಸರ್ಕಾರ ಉದ್ದೇಶ ಎಂಬ ಸಂದೇಶ ಕೊಡೋದಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.

5 ಮುಸ್ಲಿಂ ಕುಟುಂಬಗಳು ಸೇರಿ 6 ಜನರಿಗೆ 25 ಪರಿಹಾರ ಕೊಡೋ ಮೂಲಕ ಕೇಸರಿ ನಾಯಕರಿಗೆ ನೈತಿಕ ಪೋಲಿಸ್ ಗಿರಿಯ ಕೌಂಟರ್ ಕೊಟ್ಟಿದ್ದಾರೆ..

ರಾಜ್ಯ ಸರ್ಕಾರ ಇವತ್ತು ಮತ್ತೆ ಬಿಜೆಪಿಗೆ ತಿರುಗೇಟು ನೀಡಿದೆ ಬಿಜೆಪಿ ಸರ್ಕಾರ ಇದ್ದಾಗ ಕೋಮುಗಲಭೆಯಲ್ಲಿ ಮೃತಪಟ್ಟ ಫಾಸಿಲ್, ಇದ್ರಿಸ್, ಮಜೀದ್, ಜಲೀಲ್, ಸಮೀರ್, ದೀಪಕ್ ರಾವ್ ಕುಟುಂಬ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಪರಿಹಾರದ ಚೆಕ್ ನೀಡಿ ಸರ್ಕಾರಿ ಕೆಲಸದ ನೀಡುವ ಭರವಸೆಯನ್ನ ನೀಡಿ ನಾವು ಎಲ್ಲಾ ಧರ್ಮದ ಪರ ಇದ್ದೇವೆ ಎಂಬ ಸಂದೇಶವನ್ನ ರವಾನಿಸಿದ್ರು. ಕೋಮುಗಲಭೆಗಳಿಗೆ ಬಲಿಯಾದ ಮೃತರ ಹೆಸರಲ್ಲೂ ಬಿಜೆಪಿ ತಾರತಮ್ಯ ನೀತಿಯನ್ನು ಅನುಸರಿಸಿತ್ತು. ಮೃತರ ಕುಟುಂಬದವರ ಕಣ್ಣೀರು ಒರೆಸುವುದು ಮತ್ತು ಪರಿಹಾರ ವಿತರಣೆಯಲ್ಲೂ ಹಿಂದಿನ ಸರ್ಕಾರ ತಾರತಮ್ಯವನ್ನು ಮೆರೆದಿತ್ತು. ಹಿಂದಿನ ಬಿಜೆಪಿ ಪರಿವಾರ ಮಾಡಿದ ತಾರತಮ್ಯವನ್ನು ಸರಿ ಪಡಿಸಿದ್ದೇವೆ ಅಂತ ಬಿಜೆಪಿಗೆ ತಿರುಗೇಟು ನೀಡಿದ್ರು.

ಬಿಜೆಪಿ ಸರ್ಕಾರ ಇದ್ದಾಗ ಕೋಮುಗಲಭೆಗಳಲ್ಲಿ ಸತ್ತವರಿಗೆ 25 ಲಕ್ಷ ಪರಿಹಾರ ಕೊಟ್ಟಿದಾರೆ. ಆದ್ರೆ ಎಲ್ಲರಿಗೂ ಪರಿಹಾರ ಕೊಡದೆ, ಹಿಂದೂಗಳಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ.ಮುಸಲ್ಮಾನರೂ ಸತ್ತಿದಾರೆ ಪರಿಹಾರ ಕೊಡಿ ಅಂತ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆಬಿಜೆಪಿಯವ್ರು ನೋಡ್ತೀವಿ, ಕೊಡ್ತೀವಿ ಅಂತ ಕೊಡ್ಲಿಲ್ಲ. ಹರ್ಷ ಮತ್ತು ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಮಾತ್ರ ತಲಾ 25 ಲಕ್ಷ ಪರಿಹಾರ ಕೊಟ್ಟು ಸರ್ಕಾರಿ‌ ಕೆಲಸ ಕೊಟ್ರು ಆದ್ರೆ ಮಸೂದ್, ಫಾಜೀಲ್, ಅಬ್ದುಲ್ ಜಲೀಲ್, ಇದ್ರಿಸ್ ಪಾಷ, ಸಮೀರ್, ದೀಪಕ್ ರಾವ್ ಈ ಆರು ಜನರ ಕುಟುಂಬಗಳಿಗೆ ಪರಿಹಾರ ಕೊಡಲಿಲ್ಲ ನಮ್ಮ‌ ಸರ್ಕಾರ ಅವರಿಗೆ ಪರಿಹಾರ ನೀಡಿದೆ. ಇನ್ನೂ ಹತ್ಯೆಯಾದವರ ಕುರಿತ ತನಿಖೆಯನ್ನು ಪಾರದರ್ಶಕ ವಾಗಿ, ಕಾನೂನಾತ್ಮಕವಾಗಿ ಮಾಡ್ತೀವಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸ್ತೀವಿ ಅಂತಾ ಎಚ್ಚರಿಕೆ ನೀಡಿದ್ರು ಸಿಎಂ

ಬಿಜೆಪಿ ಸರ್ಕಾರ ಇದ್ದಾಗ ಕೋಮುಗಲಭೆಗಳಲ್ಲಿ ಸತ್ತವರಿಗೆ 25 ಲಕ್ಷ ಪರಿಹಾರ ಕೊಟ್ಟಿದಾರೆ. ಆದ್ರೆ ಎಲ್ಲರಿಗೂ ಪರಿಹಾರ ಕೊಡದೆ, ಹಿಂದೂಗಳಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ.ಮುಸಲ್ಮಾನರೂ ಸತ್ತಿದಾರೆ ಪರಿಹಾರ ಕೊಡಿ ಅಂತ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆಬಿಜೆಪಿಯವ್ರು ನೋಡ್ತೀವಿ, ಕೊಡ್ತೀವಿ ಅಂತ ಕೊಡ್ಲಿಲ್ಲ. ಹರ್ಷ ಮತ್ತು ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಮಾತ್ರ ತಲಾ 25 ಲಕ್ಷ ಪರಿಹಾರ ಕೊಟ್ಟು ಸರ್ಕಾರಿ‌ ಕೆಲಸ ಕೊಟ್ರು ಆದ್ರೆ ಮಸೂದ್, ಫಾಜೀಲ್, ಅಬ್ದುಲ್ ಜಲೀಲ್, ಇದ್ರಿಸ್ ಪಾಷ, ಸಮೀರ್, ದೀಪಕ್ ರಾವ್ ಈ ಆರು ಜನರ ಕುಟುಂಬಗಳಿಗೆ ಪರಿಹಾರ ಕೊಡಲಿಲ್ಲ ನಮ್ಮ‌ ಸರ್ಕಾರ ಅವರಿಗೆ ಪರಿಹಾರ ನೀಡಿದೆ.

ಇನ್ನೂ ಹತ್ಯೆಯಾದವರ ಕುರಿತ ತನಿಖೆಯನ್ನು ಪಾರದರ್ಶಕ ವಾಗಿ, ಕಾನೂನಾತ್ಮಕವಾಗಿ ಮಾಡ್ತೀವಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸ್ತೀವಿ ಅಂತಾ ಎಚ್ಚರಿಕೆ ನೀಡಿದ್ರು ಸಿಎಂ ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗೆ ಪದೇ ಪದೇ ಕೋಮು ದ್ವೇಶದ ವಿರುದ್ಧ ಎಚ್ಚರಿಕೆಯನ್ನ ನೀಡ್ತಿದೆ ಅನ್ನೋದು ಸಾಬೀತಾಗ್ತಿದೆ. ಕೋಮು ಗಲಭೆಯಲ್ಲಿ ಒಂದು ಧರ್ಮದ ಪರ ಇದ್ದಾರೆ ಎಂಬ ಹಣೆಪಟ್ಟಿಯ ಆರೋಪ ಮಾಡಿದ್ದ ಬಿಜೆಪಿಗೆ ಸಿಎಂ ತಮ್ಮದೇ ಆದ ಸ್ಟ್ರಾಟಜಿ ಮೂಲಕ ಉತ್ತರ ಕೊಟ್ಟಿದ್ದಾರೆ. ಕೋಮು ಗಲಭೆಯಲ್ಲಿ ಮೃತ ಪಟ್ಟವರ ಪ್ರಕರಣವನ್ನ ತನಿಖೆ ಮಾಡಿಸ್ತಿವಿ ಅಂತ ಹೇಳಿರೋದು ಬಾರಿ ಕುತುಹಲ ಮೂಡಿಸಿದೆ..

About Author

Leave a Reply

Your email address will not be published. Required fields are marked *

You may have missed