BREAKING NEWS :ಪಾಕ್ ಮೇಲೆ ಅಣುಬಾಂಬ್ ಹಾಕ್ತಾರಾ ಮೋದಿ ?

ಪಾಪಿ ಪಾಕಿಸ್ತಾನಕ್ಕೆ ಭಾರತದ ನೇರ ವಾರ್ನಿಂಗ್ ನೀಡಿದೆ. ಆಟಾಟೋಪ ಮುಂದುವರಿದರೆ ಅಣುಬಾಂಬ್ ಇದೆ ಎಂದು ಕೊಂಚ ಜೋರಾಗಿಯೇ ಹೇಳಿದೆ. ನಾವು ಮೊದಲು ಅಣುಬಾಂಬ್ ಹಾಕಲ್ಲ ಎಂದು ಹಿಂದೆ ಹೇಳಿದ್ದೆವು. ಆದರೆ ನಮ್ಮ ನೀತಿ ಯಾವಾಗ ಬೇಕಾದರೂ ಬದಲಾಗಬಹುದು. ಮೊದಲು ನಾವು ಹಾಕುವುದಿಲ್ಲ ಎಂಬುದು ಯಾವಾಗ ಬೇಕಾದರೂ ಬದಲಾಗುತ್ತದೆ ಎಂದು ಭಾರತ ಇಡೀ ಜಗತ್ತಿಗೇ ಕೇಳುವ ಹಾಗೆ ಹೇಳಿದೆ.
ಸೇನಾ ಕಾರ್ಯಕ್ರಮವೊಂದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಘೋಷಣೆ ಮಾಡಿದ್ದಾರೆ. ತ್ರಿವಳಿ ತಲಾಕ್, 370 ರದ್ದು, 35ಎ ರದ್ದು ಮಾಡಿದ ಬೆನ್ನಲ್ಲೇ ಪಾಕಿಸ್ತಾನಕ್ಕೆ ಫೈನಲ್ ವಾರ್ನಿಂಗ್ ನೀಡಿರೋದು ಈಗ ಜಾಗತಿಕ ಕುತೂಹಲಕ್ಕೆ ಕಾರಣವಾಗಿದೆ. ಭಾರತ-ಪಾಕ್ ನಡುವೆ ಯುದ್ಧ ನಡೆಯುತ್ತಾ ?ಯುದ್ಧವಾದರೆ ಭಾರತ ಪಾಕ್ ಮೇಲೆ ಅಣುಬಾಂಬ್ ಪ್ರಯೋಗಿಸುತ್ತಾ ?ಅಣುಬಾಂಬ್ ಹಾಕಿದರೆ ಪಾಕ್ ಸರ್ವನಾಶವಾಗುತ್ತಾ? ಪಾಕಿಸ್ತಾನದ ಯುದ್ಧೋನ್ಮಾದಕ್ಕೆ ತಕ್ಕ ಶಾಸ್ತಿ ಮಾಡ್ತಾರಾ ಮೋದಿ-ಶಾ ? ಮೊದಲಾದ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಪಿಒಕೆ ವಶಪಡಿಸಿಕೊಳ್ಳಲು ಮುಂದಾಗುತ್ತಾ ಭಾರತ ? ಇನ್ನಾರು ತಿಂಗಳಲ್ಲಿ ಪಿಒಕೆ ವಶಪಡಿಸಿಕೊಳ್ಳಲು ಮೋದಿ-ಶಾ ಜೋಡಿ ಪ್ಲಾನ್ ರೆಡಿ ಮಾಡಿದೆ ಎನ್ನಲಾಗ್ತಿದೆ. ಬ್ಲೂ ಪ್ರಿಂಟ್ ಪ್ರಕಾರವೇ ಸೇನೆಯನ್ನೂ ಸಜ್ಜುಗೊಳಿಸಲಾಗ್ತಿದೆಯಂತೆ. ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ಪ್ರಾಣ ಕೊಟ್ಟೇವು ಎಂದು ಅಮಿತ್ ಸಾ ಲೋಕಸಭೆಯಲ್ಲಿ ಗುಡುಗಿರೋದು ಇಲ್ಲಿ ಸ್ಮರಣಾರ್ಹ.

Add Comment