ಅಯ್ಯೋ ! ದುಡ್ಡಿಗೋಸ್ಕರ ಪಾಕ್ ಈ ಕೆಲ್ಸ ಮಾಡಿತಾ?

1 Star2 Stars3 Stars4 Stars5 Stars (No Ratings Yet)
Loading...

 

ಇಸ್ಲಾಮಾಬಾದ್: ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಪಾಕಿಸ್ತಾನ `ಖೈಬರ್ ಫಾಖ್ತೂಂಕ್ವಾ ಇನ್ವೆಸ್ಟ್‌ಮೆಂಟ್‌ ಆಪರ್ಚುನಿಟೀಸ್ ಕಾನ್ಫರೆನ್ಸ್’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬೆಲ್ಲಿ ಡ್ಯಾನ್ಸರ್‌ಗಳನ್ನು ಕರೆಸಿ ನೃತ್ಯ ಮಾಡಿಸುವ ಮೂಲಕ ಹೂಡಿಕೆದಾರರ ಸೆಳೆಯಲು ಪಾಕ್ ಮುಂದಾಗಿತ್ತು. ಪಾಕ್‍ನ ಈ ಹೊಸ ಪ್ರಯತ್ನ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಪಾಕಿಸ್ತಾನ ತನ್ನ ವೆಚ್ಚ ಕಡಿತಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸುದ್ದಿಯಾಗಿತ್ತು. ಆದರೆ ಈಗ ಬೆಲ್ಲಿ ಡ್ಯಾನ್ಸರ್‌ಗಳ ಮೂಲಕ ಮತ್ತೆ ಪಾಕ್ ನಗೆಪಾಟಲಿಗೆ ಕಾರಣವಾಗಿದೆ. ಹೊಸ ಪ್ರಯತ್ನಕ್ಕೆ ಕೈ ಹಾಕಿ ಮತ್ತೆ ಟ್ರೋಲ್ ಆಗುತ್ತಿದೆ.

ಈ ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸರ್‌ಗಳ ನೃತ್ಯ ಕಾರ್ಯಕ್ರಮ ಏರ್ಪಡಿಸಿ ಹೂಡಿಕೆದಾರರನ್ನು ಸೆಳೆಯಲು ಪ್ಲಾನ್ ಮಾಡಿತ್ತು. ಸಮಾವೇಶದ ನಡುವೆ ವೇದಿಕೆಯ ಮೇಲೆ ಬೆಲ್ಲಿ ಡ್ಯಾನ್ಸರ್‌ಗಳು ಸೊಂಟ ಬಳುಕಿಸಿ ಹೂಡಿಕೆದಾರ ಮನಗೆಲ್ಲಲು ಪ್ರಯತ್ನಿಸಿದರು. ಆದರೆ ಈ ಪ್ರಯತ್ನ ಹೂಡಿಕೆದಾರರ ಮನ ಗೆದ್ದಿತ್ತೋ ಇಲ್ವೋ? ಆದರೆ ಹೂಡಿಕೆದಾರರ ಪಾಕೆಟ್ ಗೆಲ್ಲುವಲ್ಲಿ ಮಾತ್ರ ಅಟ್ಟರ್ ಫ್ಲಾಪ್ ಆಗಿದ್ಯಂತೆ.

ನಯಾ ಪಾಕಿಸ್ತಾನಕ್ಕೆ ಹೂಡಿಕೆದಾರರಿಗೆ ಸ್ವಾಗತ, ಕತ್ತೆ, ನಾಯಿಯನ್ನು ಮಾರಾಟ ಮಾಡುವುದರಿಂದ ಹಿಡಿದು ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸ್ ಕಾರ್ಯಕ್ರಮ ಏರ್ಪಡಿಸುವ ಮೂಲಕ ಪಾಕ್ ತನ್ನ ಆರ್ಥಿಕತೆ ಸರಿ ಮಾಡಿಕೊಳ್ಳಲು ನೋಡುತ್ತಿದೆ. ಹಾದಿ ತಪ್ಪಿರುವ ತನ್ನ ಆರ್ಥಿಕತೆಯನ್ನು ಸರಿದಾರಿಗೆ ತರಲು ಪಾಕಿಸ್ತಾನ ಚಿತ್ರ ವಿಚಿತ್ರ ಪ್ರಯತ್ನಕ್ಕೆ ಕೈ ಹಾಕುತ್ತಿದೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಹೂಡಿಕೆದಾರರನ್ನು ಸೆಳೆಯಲು ಬೆಲ್ಲಿ ಡ್ಯಾನ್ಸಿಂಗ್ ಬಿಟ್ಟರೆ ಬೇರೆ ಯಾವುದೇ ದಾರಿ ಪಾಕ್ ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಪಾಕ್ ಕಾಲೆಳೆಯುತ್ತ ವ್ಯಂಗ್ಯವಾಡಿದ್ದಾರೆ.

Add Comment