ವಿಶ್ವಗುರುವಾಗುವತ್ತ ಭಾರತ ? – ಟ್ರಂಪ್ ಮಣಿಸಲು ಮೋದಿ ಸಹಾಯ ಯಾಚಿಸಿದ ಇರಾನ್

1 Star2 Stars3 Stars4 Stars5 Stars (No Ratings Yet)
Loading...

ಅಮೆರಿಕಾ – ಇರಾನ್ ಮಧ್ಯೆ ಯುದ್ಧ ಭೀತಿ ಎದುರಾಗಿದ್ದು, ಸಂಕಷ್ಟದ ಸನ್ನಿವೇಶದಲ್ಲಿ ಇರಾನ್ ಭಾರತದ ಮೊರೆ ಹೋಗಿದೆ. ಇರಾನ್ ಅಧಿಕೃತವಾಗಿಯೇ ಭಾರತದ ಸಹಾಯ ಯಾಚಿಸಿದೆ. ಇರಾನ್ ಯುದ್ಧ ಬಯಸ್ತಿಲ್ಲ. ಆದರೆ, ಆತ್ಮರಕ್ಷಣೆಗಾಗಿ ಕ್ರಮ ಅನಿವಾರ್ಯವಾಗಿತ್ತು. ಅಮೆರಿಕಾ ಜೊತೆ ಶಾಂತಿ ಘೋಷಣೆಗೆ ಸಿದ್ಧ ಅಂತ ಇರಾನ್ ಹೇಳಿದೆ.

ದಯವಿಟ್ಟು ಶಾಂತಿ ಸ್ಥಾಪಿಸಲು ಸಹಾಯ ಮಾಡಿ. ಸಂಘರ್ಷದ ಸಮಯದಲ್ಲಿ ಭಾರತವೇ ನಿರ್ಣಾಯಕವಾಗಿದೆ. ಪರಿಸ್ಥಿತಿ ತಿಳಿಗೊಳಿಸುವಲ್ಲಿ ಭಾರತ ಮುಖ್ಯ ಪಾತ್ರ ನಿರ್ವಹಿಸಬಲ್ಲದು. ಅಮೆರಿಕಾ , ಇರಾನ್ ಎರಡೂ ರಾಷ್ಟ್ರಗಳೊಂದಿಗೆ ಭಾರತದ ಸ್ನೇಹ ಉತ್ತಮವಾಗಿದ್ದು, ಶಾಂತಿ ನೆಲೆಸುವಂತೆ ಮಾಡಲು ಭಾರತದಿಂದ ಮಾತ್ರ ಸಾಧ್ಯ ಎಂದು ಇರಾನ್ ಅಭಿಪ್ರಾಯಪಟ್ಟಿದೆ. ಭಾರತ ಮಧ್ಯಸ್ಥಿಕೆ ವಹಿಸುವುದಾದರೆ ಸ್ವಾಗತ ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಅಲಿ ಚೆಗೇನಿ ಹೇಳಿದ್ದಾರೆ. ವಿದೇಶಾಂಗ ಸಚಿವಾಲಯದ ಸಂಪರ್ಕದಲ್ಲಿರೋ ಅಲಿ ಚೆಗೇನಿ ಅಮೆರಿಕಾ ಜೊತೆ ಮಾತನಾಡುವಂತೆ ದುಂಬಾಲು ಬಿದ್ದಿದ್ದಾರೆ.

ಅಂದ ಹಾಗೆ ಇರಾನ್ ವಿರುದ್ಧ ಯಾವುದೇ ಕ್ಷಣ ಅಮೇರಿಕ ವಾರ್ ಘೋಷಣೆಯಾಗಲಿದೆ. ಇಂದು ಮಧ್ಯ ರಾತ್ರಿ ಇರಾನ್​ ಇರಾಕ್​ನಲ್ಲಿರೋ ಅಮೆರಿಕಾದ 2 ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. 12ಕ್ಕೂ ಹೆಚ್ಚು ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿದೆ. ಆರ್ಮಿ ಮುಖ್ಯಸ್ಥ ಸುಲೇಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಈ ದಾಳಿ ನಡೆಸಿದೆ. ಸುಲೇಮಾನಿ ಅಂತ್ಯಸಂಸ್ಕಾರ ನಡೆದ ದಿನವೇ ಇರಾನ್ ಪ್ರತೀಕಾರಕ್ಕೆ ಇಳಿದಿದೆ. ಇರಾನ್ ದಾಳಿಯಲ್ಲಿ 80ಕ್ಕೂ ಹೆಚ್ಚು ಅಮೆರಿಕಾ ಸೈನಿಕರು ಮೃತಪಟ್ಟಿದ್ದಾರೆ. ಅಮೆರಿಕಾ ಪ್ರತಿದಾಳಿ ನಡೆಸುವುದು ಬಹುತೇಕ ಖಚಿತವಾಗಿದೆ.

Add Comment