ಭಾರೀ ಮಳೆ ನೀರಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್-ಈರುಳ್ಳಿ ಬೆಳೆಯೂ ನಾಶ

ಭಾರೀ ಮಳೆ ನೀರಲ್ಲೇ ಟ್ರ್ಯಾಕ್ಟರ್ ಚಲಿಸುವ ಹುಚ್ಚು ಸಾಹಸಕ್ಕೆ ಬ್ರೇಕ್ ಬಿದ್ದು ಆ ಟ್ರ್ಯಾಕ್ಟರ್ ಮಳೆ ನೀರಲ್ಲೇ ಕೊಚ್ಚಿ ಹೋದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಚಿಗತನಹಳ್ಳಿ ಗ್ರಾಮದಲ್ಲಿ ರಸ್ತೆ ಮೇಲೆ ಮಳೆ ನೀರು ರಭಸವಾಗಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಓರ್ವ ಟ್ರ್ಯಾಕ್ಟರ್ ಚಲಾಯಿಸಿದ್ದಾನೆ. ಪರಿಣಾಮ ಆ ಟ್ರ್ಯಾಕ್ಟರ್ ನೀರಲ್ಲಿ ಕೊಚ್ಚಿ ಹೋಗಿದೆ. ಆದರೆ ಅದೃಷ್ಟವವಾತ್ ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿಯ ರಾಣಿ ಕೆರೆ ತುಂಬಿ ಹರಿಯುತ್ತಿದೆ. ಇದರಿಂದ ಮಾರುಕಟ್ಟೆಗೆ ಬರಬೇಕಿದ್ದ ಈರುಳ್ಳಿ ಬೆಳೆ ಮಳೆ ನೀರಲ್ಲಿ ಕೊಚ್ಚಿಹೋಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಕರ್ನಾಟಕಕ್ಕೆ ಬೇಕಾಗುವಷ್ಟು ಗುಣಮಟ್ಟದ ಈರುಳ್ಳಿಯನ್ನು ಬೆಳೆಯಲಾಗುತ್ತಿದ್ದು ಭಾರೀ ಮಳೆಗೆ ಈರುಳ್ಳಿ ಬೆಳೆ ಹಾಳಾಗುತ್ತಿರುವ ಕಾರಣ ರಾಜ್ಯದಲ್ಲಿ ಈರುಳ್ಳಿ ಬೆಲೆ ಏರುವ ಸಾಧ್ಯತೆಯಿದೆ.
ಕೆ ಟಿವಿ ನ್ಯೂಸ್ ಚಿತ್ರದುರ್ಗ

Add Comment