ಅಕ್ಟೋಬರ್ 15ರಿಂದ ದೇಶಾದ್ಯಂತ ಸಿನಿಮಾ ಥಿಯೇಟರ್-ಮಲ್ಟಿಪ್ಲೆಕ್ಸ್ ಪುನರಾರಂಭಕ್ಕೆ ಕೇಂದ್ರ ಅನುಮತಿ

ಹೌದು, ಕೊನೆಗೂ ಕೇಂದ್ರಸರ್ಕಾರ ಕೊರೊನಾ ಮಾರ್ಗಸೂಚಿಯಂತೆ ದೇಶಾದ್ಯಂತ ಅಕ್ಟೋಬರ್ 15ರಿಂದ ಸಿನಿಮಾ ಥಿಯೇಟರ್ ಗಳು ಮತ್ತು ಮಲ್ಟಿ ಪ್ಲೆಕ್ಸ್ ಗಳನ್ನು ಪುನರಾರಂಭಿಸಲು ಅನುಮತಿ ನೀಡಿದೆ‌.
ಆದರೆ ಶೇಕಡಾ 50ರಷ್ಟು ಆಸನಗಳನ್ನು ಮಾತ್ರ ವೀಕ್ಷಕರಿಗೆ ಕುಳಿತು ಸಿನಿಮಾ ನೋಡಲು ಅವಕಾಶ ನೀಡಬೇಕು. ಆದರೆ ಏನಾದರೂ ಸಿನಿಮಾ ಥಿಯೇಟರ್ ಗಳು ಅಥವಾ ಮಲ್ಡಿಪ್ಲೆಕ್ಸ್ ಈ ಕೊರೊನಾ ಮಾರ್ಗಸೂಚಿಯನ್ನು ಪಾಲಿಸದೇ ಹೋದರೆ ಸರ್ಕಾರ ಪೊಲೀಸರ ಮೂಲಕ ಲೈಸೆನ್ಸ್ ರದ್ದುಪಡಿಸಲು ನೋಟಿಸ್ ಕಳುಹಿಸುತ್ತದೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment