BREAKING NEWS -ತೇಜಸ್ವೀ ಸೂರ್ಯ, ಚಕ್ರವರ್ತಿ ಹತ್ಯೆಗೆ ಸ್ಕೆಚ್ – ಜಸ್ಟ್ ಮಿಸ್

ಪ್ರಖರ ಹಿಂದೂ ಯುವಮುಖಂಡರಾರ ಸಂಸದ ತೇಜಸ್ವೀ ಸೂರ್ಯ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ರೂಪಿಸಿದ್ದ ಭಾರೀ ಸಂಚೊಂದು ಬಯಲಾಗಿದೆ. ಕಳೆದ ತಿಂಗಳು ಬೆಂಗಳೂರಿನ ಟೌನ್​ ಹಾಲ್​ ಬಳಿ ಈ ನಾಯಕರು ಪೌರತ್ವ ಪರ ಸಮಾವೇಶವ ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಅಲ್ಲಿ ಗಲಭೆ ಸೃಷ್ಟಿಸಿ, ಅವರಿಬ್ಬರ ಹತ್ಯೆಗೆ ಎಸ್​ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿದ್ದರಂತೆ. ಅವರೆಲ್ಲರೂ ಸಿಕ್ಕಿಬಿದ್ದಿದ್ದರು, ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸ್ಕೆಚ್ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಜೆಸಿ ರಸ್ತೆಯಲ್ಲಿ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆ ಆರೋಪಿಗಳ ಬೆನ್ನತ್ತಿದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ವರುಣ್ ನಮ್ಮ ಟಾರ್ಗೆಟ್ ಆಗಿರಲಿಲ್ಲ. ಸಮಾವೇಶದಲ್ಲಿ ಭಾಷಣ ಮಾಡಿದ್ದ ಇಬ್ಬರು ಹಿಂದು ಮುಖಂಡರು ನಮ್ಮ ಟಾರ್ಗೆಟ್ ಆಗಿದ್ದರು ಅಂತ ಹೇಳಿದ್ದಾರೆ. ಅವತ್ತು ಅಲ್ಲಿ ಭಾಷಣ ಮಾಡಿದ್ದೇ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ. ಆದರೆ, ಟಾರ್ಗೆಟ್ ತಪ್ಪಿದ್ರಿಂದ ವರುಣ್ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಷ್ಟರ ಮಟ್ಟಿಗಾದರೂ ಹಿಂದೂ ಸಮಾಜದಲ್ಲಿ ಭೀತಿ ಮೂಡಿಸಬೇಕೆಂದು ವರುಣ್ ಹತ್ಯೆಗೆ ಯತ್ನಿಸಿದ್ದೆವು ಅಂತ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಹೇಳಿಕೊಂಡಿದ್ದಾರೆ.

Add Comment