ನೆರೆ ಸಂತ್ರಸ್ತರ ಆಪದ್ಬಾಂಧವನಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ ಜೋಗಿಂದರ್ ಶರ್ಮಾ

0

ಮುಂಬೈ: ಅಂದು ಭಾರತ ಎಂ.ಎಸ್ ಧೋನಿ  ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಟೀಂ ಇಂಡಿಯಾ  ಪ್ರಮುಖ ರೂವಾರಿಯಾಗಿದ್ದ ವೇಗಿ ಜೋಗಿಂದರ್ ಶರ್ಮಾ  ಇದೀಗ ಡಿಎಸ್ಪಿ ಆಗಿ ನೆರೆ ಸಂತ್ರಸ್ತರ ಆಪದ್ಬಾಂಧವನಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಇತ್ತೀಚೆಗೆ ಅಂಬಾಲಾದಲ್ಲಿ ಪ್ರವಾಹ ಸಂಭವಿಸಿದ ವೇಳೆ ಸಹಾಯಕ್ಕೆ ಧಾವಿಸಿದ್ದರು. ಈ ಕುರಿತ ಚಿತ್ರಗಳನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದೋಪಾದಿಯಲ್ಲಿ ಮಳೆಯಾಗುತ್ತಿದ್ದು, ಡಿಎಸ್ಪಿ ಆಗಿರುವ ಜೋಗಿಂದರ್ ಶರ್ಮಾ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ
ಟಿ20 ವಿಶ್ವಕಪ್ ಚೊಚ್ಚಲ ಆವೃತ್ತಿಯಲ್ಲೇ  ಟೀಂ ಇಂಡಿಯಾ ರೋಚಕ ಗೆಲುವು ದಾಖಲಿಸಿದ್ದನ್ನು ಪ್ರತಿಯೊಬ್ಬ ಭಾರತೀಯನೂ ಮರೆಯುವಂತಿಲ್ಲ. ಅಂದಿನ ಟೀಂ ಇಂಡಿಯಾ ನಾಯಕ ಎಂ.ಎಸ್ ಧೋನಿ ಅವರ ಶ್ರೇಷ್ಠ ಪಯಣದ ಆರಂಭವು ಇದಾಗಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡವನ್ನ ಬಗ್ಗು ಬಡಿದು ಭಾರತ ರೋಚಕ ಜಯ ಸಾಧಿಸಿತ್ತು.
20 ಓವರ್ಗಳಲ್ಲಿ 157 ರನ್ ಗಳಿಸಿದ್ದ ಭಾರತ ಪಾಕ್ಗೆ 158 ರನ್ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. ಡೆತ್ ಓವರ್ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಪಾಕ್ ಗೆಲ್ಲುವ ಸನಿಹಕ್ಕೆ ಬಂದಿತ್ತು. ಕೊನೆಯ ಓವರ್ನಲ್ಲಿ 13 ರನ್ಗಳ ಅಗತ್ಯವಿದ್ದಾಗ ಜೋಗಿಂದರ್ ಶರ್ಮಾ ಬೌಲಿಂಗ್ಗೆ ಬಂದರು. ಕ್ರೀಸ್ನಲ್ಲಿದ್ದ ಪಾಕ್ ಬ್ಯಾಟ್ಸ್ಮ್ಯಾನ್ ಮಿಸ್ಬಾ ಉಲ್ ಹಕ್ ಮೊದಲ ಎಸೆತದಲ್ಲಿ 2 ರನ್ ತೆಗೆದುಕೊಂಡರೆ 2ನೇ ಎಸೆತವನ್ನು ಸಿಕ್ಸರ್ ಬಾರಿಸಿದರು. ಕೊನೆಯ 4 ಎಸೆತಗಳಲ್ಲಿ 5 ರನ್ ಬೇಕಿತ್ತು. ಇದರಿಂದ ಭಾರತ ಸೋಲುವುದು ಖಚಿತವೆಂದೇ ಭಾವಿಸಲಾಗಿತ್ತು.

About Author

Leave a Reply

Your email address will not be published. Required fields are marked *

You may have missed