ರಾತ್ರಿ 8ಕ್ಕೆ ಮತ್ತೆ ಮೋದಿ ಭಾಷಣ – ಭಾರತ ಸಂಪೂರ್ಣ ಲಾಕ್‍ಡೌನ್?

1 Star2 Stars3 Stars4 Stars5 Stars (No Ratings Yet)
Loading...

ಪದೇ ಪದೇ ಸರಕಾರದ ಆದೇಶ ಉಲ್ಲಂಘಿಸಿ ಬೀದಿಗಿಳಿದು ಕೊರೋನಾ ಪರ ಹೋರಾಡುತ್ತಿರುವ ಅಂಡೆಪಿರ್ಕಿಗಳಿಗೆ ಬುದ್ದಿ ಕಲಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಮತ್ತೆ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಿನ್ನೆ ಟ್ವೀಟ್ ಮಾಡಿದ್ದ ಮೋದಿ, ಜನರ ಅಸಡ್ಡೆಗೆ ಗರಂ ಆಗಿದ್ದರು. ಸರಕಾರದ ಮಾತು ಕೇಳದಿದ್ರೆ, ಅನಾಹುತ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಮತ್ತೆ ಟ್ವೀಟ್ ಮಾಡಿರೋ ಮೋದಿ, ರಾತ್ರಿ 8 ಗಂಟೆಗೆ ಮುಖ್ಯವಾದ ವಿಷಯ ಮಾತನಾಡಲಿಕ್ಕಿದೆ. ಕೊರೋನಾ ಬಗ್ಗೆ ಅಂತ ಟ್ವೀಟ್ ಮಾಡಿದ್ದಾರೆ.

 

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 500 ದಾಟುತ್ತಿದ್ದಂತೆಯೇ, ಪ್ರಧಾನಿ ಈ ಟ್ವೀಟ್ ಮಾಡಿದ್ದಾರೆ. ರಾಜ್ಯ ಸರಕಾರಗಳು ಲಾಕ್‍ಡೌನ್ ಘೋಷಿಸಿದ್ದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಆದರೆ, ಮೊನ್ನೆ ಭಾನುವಾರ ಪ್ರಧಾನಿಯವರು ಕೊಟ್ಟ ಜನತಾ ಕರ್ಫ್ಯೂಗೆ ಭಾರೀ ಆಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೋದಿ ವಿರೋಧಿಗಳು ಚಪ್ಪಾಳೆ ತಟ್ಟಿದ್ದರು.

ಹೀಗಾಗಿ, ಖುದ್ದು ಮೋದಿಯೇ ಇದೀಗ ಮತ್ತೆ ಅಖಾಡಕ್ಕೆ ಇಳಿಯೋ ಸೂಚನೆ ನೀಡಿದ್ದಾರೆ. ತಾವೇ ಲಾಕ್‍ಡೌನ್ ಘೋಷಿಸೋ ಸಾಧ್ಯತೆಗಳೂ ಇವೆ.

Add Comment