ಸಚಿವ ಗೋಪಾಲಯ್ಯರಿಂದ ಕೊರೋನಾ ಜಾಗೃತಿ ಅಭಿಯಾನ

1 Star2 Stars3 Stars4 Stars5 Stars (No Ratings Yet)
Loading...

ಕೋರೊನ ಹರಡದಂತೆ ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರದಲ್ಲಿ ಆಹಾರ ಸಚಿವ ಕೆ ಗೋಪಲಯ್ಯ ಅವರು ಜನರಿಗೆ ಜಾಗೃತಿ ಮೂಡಿಸಿದ್ದು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಕ್ರಿಮಿನಾಶಕಗಳನ್ನ‌ ಸಿಂಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಖುದ್ದು ಗೋಪಾಲಯ್ಯ ಅವರು ಅಧಿಕಾರಿಗಳ ಜೊತೆ ಇದ್ದು ಕ್ರಿಮಿನಾಶಕಗಳನ್ನ ಸಿಂಪಡಿಸಿದ್ರು. ನಂತ್ರ ಸಚಿವರು ಜನರು ಹೊರಗೆ ಬಾರದಂತೆ ಪ್ರತಿ ವಾರ್ಡ್ ನ ಜನರಿಗೆ ಜಾಗೃತಿ ಮೂಡಿಸಲು ಆಟೋಗಳಿಗೆ ಚಾಲನೆ ನೀಡಿದ್ರು. ಹಾಗೇ ತರಕಾರಿ ಮಂಡಿಗೆ ಭೇಟಿ ನೀಡಿದ ಸಚಿವರು ತರಕಾರಿಗಳನ್ನ ಹೋಲ್ ಸೇಲ್ ರೇಟ್ ನಲ್ಲಿ ಮಾರಟ ಮಾಡಿ. ಜನ ಸ್ನೇಹಿ ಬೆಲೆ ನಿಗದಿ ಮಾಡಿ. ವ್ಯಾಪಾರಿಗಳು ಬೆಲೆ ಜಾಸ್ತಿ ಮಾಡಿ ವ್ಯಪಾರ ಮಾಡ್ತಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ಹಾಗೇ ತರಕಾರಿ ವ್ಯಾಪಾರಕ್ಕೆ ಕಮಲಮ್ಮನ ಗುಂಡಿ ಗ್ರೌಂಡ್, ಶಂಕರ ಮಂಠ ಗ್ರೌಂಡ್, ಹಾಗೇ ನಂದಿನಿ ಲೇಔಟ್ ಗ್ರೌಂಡ್ ನ ಬಳಸಿಕೊಳ್ಳಿ . ಗುಂಪು ಗುಂಪಾಗಿ ಜನ ಸೇರುವುದು ಕಡಿಮೆ ಮಾಡಿ. ಹೆಚ್ಚಾಗಿ ಜನ ಸೇರಿದ್ರೆ ಅತಿ ವೇಗವಾಗಿ ಕೋರೊನ ಹರಡುವ ಸದ್ಯತೆ ಇದೆ ಎಂದು ತಿಳಿಸಿದ್ರು.

ರಾಜ್ಯದ ಜನತೆ ಯಾರೂ ಹೊರಗೆ ಬರಬೇಡಿ ಕೊರೋನ ಎಂಬ ಮಹಾಮಾರಿಯಂದ ದೂರಯಿರಿ ಗುಂಪಾಗಿ ಯಾರೂ ಸೇರಬೇಡಿ ನಿಮ್ಮ ಕುಟುಂಬದ ರಕ್ಷಣೆ ಮಾಡಿಕೊಳ್ಳಿ ಕೆಲವುದಿನ ಕಷ್ಟವಾಗುತ್ತದೆ ಎಂದು ಜೀವ ಕಳೆದುಕೊಳ್ಳಬೇಡಿ ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ನಮ್ಮ ಮುಖ್ಯ ಮಂತ್ರಿಗಳೂ ಮನವಿಮಾಡಿದ್ದಾರೆ ನಾನೂನಿಮ್ಮಲ್ಲಿ ಕೈಮುಗಿದು ಮನವಿಮಾಡುತ್ತೇನೆ ತಮ್ಮಗಳ ಜೀವಕಳೆದುಕೊಳ್ಳಬೇಡಿ ಎಂದು ರಾಜ್ಯದ ಮತ್ತು ಕ್ಷೇತ್ರದ ಜನತೆಯಲ್ಲಿ ಸಚಿವರು ಮನವಿ ಮಾಡಿದರು

Add Comment