BIG BREAKING- ನಿಜಾಮುದ್ದೀನ್ ಮಸೀದಿ ಭಾರತದ ಕೊರೋನಾ ಹಾಟ್‌ಸ್ಪಾಟ್ – ೧೦ ಮಂದಿ ಬಲಿ

1 Star2 Stars3 Stars4 Stars5 Stars (No Ratings Yet)
Loading...

 

ದೆಹಲಿ : ದೆಹಲಿಯ ನಿಜಾಮುದ್ದೀನ್‌ನಲ್ಲಿರೋ ಅಲೇಮಿ ಮರ್ಕಾಜಾ ಮಸೀದಿ ದೇಶದ ಕೊರೋನಾ ಹಾಟ್‌ಸ್ಪಾಟ್ ಆಗಿ ಬದಲಾಗಿದೆ. ಮಾರ್ಚ್ ೧೩-೧೫ರವರೆಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರಲ್ಲಿ, ಸೋಂಕಿತರಲ್ಲಿ ಹೆಚ್ಚಿನವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನುವುದು ಈಗ ಸರಕಾರದ ಚಿಂತೆಗೆ ಕಾರಣವಾಗಿದೆ.

ಆ ಕಾರ್ಯಕ್ರಮಕ್ಕೆ ಹೋಗಿದ್ದ ತೆಲಂಗಾಣ ಮೂಲದ ೬ ಮಂದಿ ಈಗ ಕೊರೊನಾ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. ದೆಹಲಿ ಸರಕಾರದ ಅಧಿಕೃತ ಮಾಹಿತಿಯಂತೆ, ಈ ಕಾರ್ಯಕ್ರಮದಲ್ಲಿ ಸುಮಾರು ೧೭೦೦ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಈ ಪೈಕಿ ೨೪ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ನಿಜಾಮುದ್ದೀನ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದ, ೩೩೪ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ೭೦೦ಕ್ಕೂ ಹೆಚ್ಚು ಮಂದಿಗೆ ಕ್ವಾರೆಂಟೈನ್ ಘೋಷಿಸಲಾಗಿದೆ.

ಗಮನಾರ್ಹ ಸಂಗತಿ ಎಂದರೆ, ಭಾರತದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಪೈಕಿ ೧೦ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ತುಮಕೂರಿನ ವ್ಯಕ್ತಿಯೂ ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ಸಾಗಿದ್ದರು.

 

ಅಚ್ಚರಿಯೆಂದರೆ ಇಂದು ಮುಂಜಾನೆವರೆಗೂ ಸುಮಾರು ೧೨೦೦ ಮಂದಿ ಇದೇ ಮಸೀದಿಯಲ್ಲಿ ತಂಗಿದ್ದರು. ಹೀಗಾಗಿ, ಎಲ್ಲರಿಗೂ ಕೊರೋನಾ ಸೋಂಕು ತಗುಲಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಮುಖ್ಯಮಂತ್ರಿ ಕೇಜ್ರಿವಾಲ್ ಆದೇಶದಂತೆ ಈಗಾಗಲೇ ೮೦೦ ಜನರನ್ನು ಮಸೀದಿಯಿಂದ ಸ್ಥಳಾಂತರಿಸಲಾಗಿದೆ. ಆದಾಗ್ಯೂ ಮಸೀದಿಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿಲ್ಲ. ನಾವು ಸರಕಾರದ ಜೊತೆ ಸ್ಪಂದಿಸುತ್ತಿದ್ದೇವೆ ಎಂದು ಮಸೀದಿಯ ಆಡಳಿತ ಪ್ರಕಟಣೆಯಲ್ಲಿ ಪ್ರತಿಪಾದಿಸಿದೆ.

Add Comment