ಕಾಂಗ್ರೆಸ್​ಗೆ ಗೌಡರ ವಾರ್ನಿಂಗ್ – ಮುಗಿಯಿತಾ ಮೈತ್ರಿ ಆಯಸ್ಸು?

ಕಾಂಗ್ರೆಸ್ ನಾಯಕರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ. ಹೌದು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೂಲಕ ಎಚ್‍ಡಿಡಿ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ಸಂದೇಶ ರವಾನೆ ಮಾಡಿದ್ದಾರೆ.

ಎಚ್‍ಡಿಡಿ ವಾರ್ನಿಂಗ್ ಏನು?

ಪ್ರತಿದಿನ ಎಳೆದಾಟ ಸಾಧ್ಯವಿಲ್ಲ. ಅಧಿಕಾರಕ್ಕಾಗಿ ನಾವು ಅಂಟಿಕೊಂಡಿಲ್ಲ. ಚುನಾವಣೆಯಲ್ಲಂತೂ ಕಾಂಗ್ರೆಸ್ ಬೆಂಬಲ ಸಿಕ್ಕಿಲ್ಲ. ಸರ್ಕಾರ ಮುನ್ನಡೆಸಲು ಸೂಕ್ತ ಬೆಂಬಲ ಸಿಗತ್ತಾ ಎಂದು ಪ್ರಶ್ನಿಸಿದ್ದಾರೆ. ಒಂದಷ್ಟು ಶಾಸಕರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಇದೇನು ಮಕ್ಕಳಾಟವೇ? ದಿನ ಬೆಳಗಾದ್ರೆ ಶಾಸಕರನ್ನ ಸಮಾಧಾನಿಸುವುದೇ ಆಯ್ತು. ಕೆಲಸ ಮಾಡೋದು ಯಾವಾಗ? ಸರ್ಕಾರ ಉಳಿಸಿಕೊಳ್ಳೋದಕ್ಕೆ ಸಮಯ ಕಳಿಯೋದಾ? ಈ ಕುರಿತು ಮುಖಂಡರ ಜೊತೆ ಮಾತಾಡಿ ಸ್ಪಷ್ಟ ನಿರ್ಧಾರಕ್ಕೆ ಬನ್ನಿ ಎಂದು ವಾರ್ನಿಂಗ್ ಮಾಡಿದ್ದಾರೆ.

ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಬೇಕು. ಆಗ ಮತ್ತೆ ಅಸಮಾಧಾನ ಅಂದರೆ ಕಷ್ಟ. ಸರ್ಕಾರ ಸುಸೂತ್ರವಾಗಿ ನಡೆಯಬೇಕು. ಇಲ್ಲದಿದ್ದರೆ ಸರ್ಕಾರ ಇದ್ದು ಪ್ರಯೋಜನ ಏನು ಎಂದು ಕೈ ಹೈ ಕಮಾಂಡಿಗೆ ಪ್ರಶ್ನೆ ಮಾಡಿದ್ದಾರೆ.

Add Comment